ADVERTISEMENT

ಪಾಕಿಸ್ತಾನ: ‘ಶಹೀನ್–2’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಪಿಟಿಐ
Published 20 ಆಗಸ್ಟ್ 2024, 15:40 IST
Last Updated 20 ಆಗಸ್ಟ್ 2024, 15:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾವಲ್ಪಿಂಡಿ: ನಿರ್ದಿಷ್ಟ ಗುರಿ ಕೇಂದ್ರೀಕರಿಸಿ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವುಳ್ಳ ಶಹೀನ್–2 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಪಾಕಿಸ್ತಾನವು ಮಂಗಳವಾರ ಯಶಸ್ವಿಯಾಗಿ ನಡೆಸಿದೆ.

ಈ ಕ್ಷಿಪಣಿಗಳು ಕ್ರಮಿಸಬಲ್ಲ ದೂರ ಸೇರಿದಂತೆ ಯಾವುದೇ ತಾಂತ್ರಿಕ ವಿವರಗಳನ್ನು ಪಾಕಿಸ್ತಾನ ಸೇನೆಯು ಹಂಚಿಕೊಂಡಿಲ್ಲ.

ಕ್ಷಿಪಣಿ ಕಾರ್ಯಕ್ಷಮತೆಯ ಮೌಲ್ಯಮಾಪನ, ಗುರಿ ತಲುಪುವಲ್ಲಿನ ನಿಖರತೆ ಹಾಗೂ ಶತ್ರುಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯದ ಬಗ್ಗೆ ಪರಿಶೀಲಿಸಲು ಹಾಗೂ ಸೇನಾಪಡೆಗಳಿಗೆ ತರಬೇತಿ ನೀಡಲು ಈ ಪ್ರಯೋಗ ನಡೆಸಲಾಯಿತು ಎಂದು ಪಾಕಿಸ್ತಾನ ಸೇನೆಯು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.