ಇಸ್ಲಾಮಾಬಾದ್: ಇಬ್ಬರು ಹಿಂದೂ ಬಾಲಕಿಯರನ್ನು ಒತ್ತಾಯದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಲ್ಲ ಎಂದು ಹೇಳಿರುವ ಇಸ್ಲಾಮಾಬಾದ್ ಹೈಕೋರ್ಟ್, ಬಾಲಕಿಯರು ತಮ್ಮ ಪತಿಯೊಂದಿಗೆ ಜೀವಿಸಲು ಅನುಮತಿ ನೀಡಿದೆ.
ಇಬ್ಬರು ಬಾಲಕಿಯರನ್ನು ಅಪಹರಿಸಿ, ಒತ್ತಾಯದಿಂದ ಮತಾಂತರಗೊಳಿಸಿ, ಮುಸ್ಲಿಂ ಯುವಕರೊಂದಿಗೆ ಮದುವೆ ಮಾಡಲಾಗಿದೆ ಎಂದು ಬಾಲಕಿಯರ ತಂದೆ ಹಾಗೂ ಸಹೋದರರು ಮಾರ್ಚ್ 25ರಂದು ಹೈಕೋರ್ಟ್‌ನಲ್ಲಿಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿ, ವರದಿ ಸಲ್ಲಿಸಲು ಮುಖ್ಯ ನ್ಯಾಯಮೂರ್ತಿ ಅಥಾರ್ ಮಿನಾಲ್ಲಹ್ ಐವರು ಸದಸ್ಯರನ್ನು ಒಳಗೊಂಡ ಆಯೋಗವೊಂದನ್ನು
ರಚಿಸಿದ್ದರು.
ತನಿಖೆ ನಡೆಸಿದ್ದ ಆಯೋಗ, ‘ಬಾಲಕಿಯರನ್ನು ಒತ್ತಾಯದಿಂದ ಮತಾಂತರ ಮಾಡಿಲ್ಲ’ ಎಂದು ವರದಿ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.