ADVERTISEMENT

ಪಾಕ್‌ ಚುನಾವಣೆ: ಹೊಸ ರಾಜಕೀಯ ಪಕ್ಷದ ಹೆಸರಿನಲ್ಲಿ ಮುಂಬೈ ದಾಳಿ ಸಂಚುಕೋರ ಭಾಗಿ

ಪಿಟಿಐ
Published 6 ಫೆಬ್ರುವರಿ 2024, 4:27 IST
Last Updated 6 ಫೆಬ್ರುವರಿ 2024, 4:27 IST
<div class="paragraphs"><p> ಚುನಾವಣೆ ಸಾಂದರ್ಭಿಕ ಚಿತ್ರ</p></div>

ಚುನಾವಣೆ ಸಾಂದರ್ಭಿಕ ಚಿತ್ರ

   

ಇಸ್ಲಾಮಾಬಾದ್‌: 2008ರ ಮುಂಬೈ ಭಯೋತ್ಪಾದನಾ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ನೇತೃತ್ವದ ನಿಷೇಧಿತ ಗುಂಪು, ಇದೇ 8ರಂದು ನಡೆಯಲಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ ಮರ್ಕಜಿ ಮುಸ್ಲಿಂ ಲೀಗ್ ಎಂಬ ಹೊಸ ರಾಜಕೀಯ ಪಕ್ಷದ ಹೆಸರಿನಲ್ಲಿ ಭಾಗಿಯಾಗುತ್ತಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಪಾಕಿಸ್ತಾನದ ವಿವಿಧ ಕಡೆ ಚುನಾವಣೆಗೆ ಸ್ಪರ್ಧಿಸಿರುವ ಕೆಲವು ಅಭ್ಯರ್ಥಿಗಳು ಹಫೀಜ್ ಸಯೀದ್‌ ಸಂಬಂಧಿಕರಾಗಿದ್ದರೆ, ಹಲವರು ನಿಷೇ ಧಿತ ಲಷ್ಕರ್–ಎ–ತಯಬಾ, ಜಮಾತ್–ಉದ್–ದಾವಾ ಅಥವಾ ಮಿಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಸಂಬಂಧ ಹೊಂದಿದ್ದವರು ಎಂದು ಬಿಬಿಸಿ ಉರ್ದು ವರದಿ ಮಾಡಿದೆ.

ADVERTISEMENT

ಪ್ರಸ್ತುತ ಲಾಹೋರ್ ಜೈಲಿನಲ್ಲಿರುವ ಸಯೀದ್‌ಗೆ, ಪಾಕಿಸ್ತಾನದ ಭಯೋ ತ್ಪಾದನಾ ವಿರೋಧಿ ನ್ಯಾಯಾಲಯವು ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಗಳಲ್ಲಿ 31 ವರ್ಷ ಶಿಕ್ಷೆ ವಿಧಿಸಿದೆ. ಈತನನ್ನು 2008ರ ಡಿ.10ರಂದೇ ವಿಶ್ವಸಂಸ್ಥೆಯ ‘ಜಾಗತಿಕ ಭಯೋತ್ಪಾದಕರ’ ಪಟ್ಟಿಗೆ ಸೇರ್ಪಡೆ ಗೊಳಿಸಲಾಗಿದೆ. 

ಹಲವು ಭಯೋತ್ಪಾದಕ ಪ್ರಕರಣಗ ಳಲ್ಲಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಹಫೀಜ್‌ನನ್ನು ಹಸ್ತಾಂತರಿ ಸುವಂತೆ ಕಳೆದ ಡಿ. 29ರಂದು ಭಾರತವು ಪಾಕಿಸ್ತಾನಕ್ಕೆ ಮನವಿ ಮಾಡಿತ್ತು.

ಪಾಕಿಸ್ತಾನದ ಚುನಾವಣೆಯಲ್ಲಿ ಸಯೀದ್‌ ಪುತ್ರ ತಲ್ಹಾ ಸ್ಪರ್ಧಿಸುತ್ತಿ ದ್ದಾರೆ ಎಂಬ ವರದಿಗಳನ್ನು ಭಾರತವು ಗಮನಿಸಿದೆ. ನೆರೆಯ ದೇಶದಲ್ಲಿ ಭಯೋತ್ಪಾದಕ ಸಂಘಟನೆಗಳು ಮುಖ್ಯವಾಹಿನಿಯಲ್ಲಿರುವುದು ಹೊಸದೇನೂ ಅಲ್ಲ. ದೀರ್ಘಕಾಲದಿಂದಲೂ ಇದು ಅಲ್ಲಿನ ರಾಜನೀತಿಯಾಗಿದೆ ಎಂದಿದೆ.

ಸಯೀದ್ ಭಯೋತ್ಪಾದಕ ಸಂಘಟನೆಯ ಚುಕ್ಕಾಣಿ ಹಿಡಿದಿದ್ದರೆ, ಈತನ ಪುತ್ರ ತಲ್ಹಾ ಎಲ್ಇಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.