ADVERTISEMENT

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಕಡಿತ

ಪಿಟಿಐ
Published 15 ಜೂನ್ 2024, 15:35 IST
Last Updated 15 ಜೂನ್ 2024, 15:35 IST
   

ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ‘ಈದುಲ್ ಅದ್‌ಹಾ’ ಹಬ್ಬದ ಪ್ರಯುಕ್ತ ಪ್ರತಿ ಲೀಟರ್‌ ಪೆಟ್ರೋಲ್‌ಗೆ ಅಲ್ಲಿನ ರೂಪಾಯಿ ಮೌಲ್ಯದಲ್ಲಿ ₹ 10 ಹಾಗೂ ಹೈಸ್ಪೀಡ್‌ ಡೀಸೆಲ್‌ಗೆ ₹ 2.33 ದರ ಕಡಿತಗೊಳಿಸಲಾಗಿದೆ.

ಭಾರತದಲ್ಲಿ ಈ ಹಬ್ಬವು ‘ಬಕ್ರೀದ್‌’ ಎಂದು ಪ್ರಸಿದ್ಧಿಯಾಗಿದೆ. ಶನಿವಾರದಿಂದಲೇ ಇಂಧನ ದರ ಕಡಿತದ ಆದೇಶ ಜಾರಿಗೆ ಬರಲಿದೆ.

ಬೆಲೆ ಇಳಿಕೆಯಿಂದಾಗಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯು ಅಲ್ಲಿನ ರೂಪಾಯಿ ಮೌಲ್ಯದಲ್ಲಿ ₹ 258.16 ಹಾಗೂ ಡೀಸೆಲ್‌ ಬೆಲೆ ₹ 267.89 ಆಗಿದೆ ಎಂದು ‘ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆಯು ಪ್ರಧಾನಿ ಕಚೇರಿಯ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ. 

ADVERTISEMENT

ಪಾಕಿಸ್ತಾನದ ಹಣಕಾಸು ಇಲಾಖೆಯು ಪ್ರತಿ ಹದಿನೈದು ದಿನಗಳಿಗೊಮ್ಮೆ ಇಂಧನ ಬೆಲೆಯ‌ನ್ನು ಪರಿಷ್ಕರಿಸಲಿದೆ. ಮುಂದಿನ ಪರಿಷ್ಕರಣೆವರೆಗೂ ಈ ಆದೇಶವೂ ಜಾರಿಯಲ್ಲಿ ಇರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.