ADVERTISEMENT

ಸಂಜೋತಾ ನಂತರ ಥಾರ್ ಎಕ್ಸ್‌ಪ್ರೆಸ್ ರದ್ದು ಮಾಡಲು ಪಾಕ್ ನಿರ್ಧಾರ

ರಾಯಿಟರ್ಸ್
Published 9 ಆಗಸ್ಟ್ 2019, 13:42 IST
Last Updated 9 ಆಗಸ್ಟ್ 2019, 13:42 IST
   

ಇಸ್ಲಾಮಾಬಾದ್: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರವು ರದ್ದು ಮಾಡಿರುವುದನ್ನು ಪ್ರತಿಭಟಿಸಿ ಪಾಕಿಸ್ತಾನ ಇದೀಗ ಥಾರ್ಎಕ್ಸ್‌ಪ್ರೆಸ್‌ನ್ನುರದ್ದುಗೊಳಿಸುವ ಚಿಂತನೆ ನಡೆಸಿದೆ. ಗುರುವಾರ ಸಂಜೋತಾ ಎಕ್ಸ್‌ಪ್ರೆಸ್‌ನ್ನು ಪಾಕ್ ರದ್ದುಗೊಳಿಸಿತ್ತು.

ನಾವು ಥಾರ್ ಎಕ್ಸ್‌ಪ್ರೆಸ್‌ನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಹೇಳಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಪಾಕಿಸ್ತಾನದ ಖೋಕ್ರಾಪರ್‌ನಿಂದ ಭಾರತದ ಮೊನಬಾವೊ ನಡುವೆ ಥಾರ್ ಎಕ್ಸ್‌ಪ್ರೆಸ್ ವಾರಕ್ಕೊಂದು ಬಾರಿ ಸಂಚರಿಸುತ್ತದೆ.ನಾನು ರೈಲ್ವೆ ಸಚಿವರಾಗಿರುವವರೆಗೆ ಪಾಕಿಸ್ತಾನ ಮತ್ತು ಭಾರತ ನಡುವೆ ಯಾವುದೇ ರೈಲು ಸಂಚರಿಸುವುದಿಲ್ಲ ಎಂದು ಶೇಖ್ ರಶೀದ್ ಹೇಳಿದ್ದಾರೆ.

ಸಂಜೋತಾ ಎಕ್ಸ್‌ಪ್ರೆಸ್ ರದ್ದು ಮಾಡುವುದರ ಜೊತೆಗೆ ಪಾಕ್‌ನಲ್ಲಿ ಬಾಲಿವುಡ್ ಸಿನಿಮಾ ಪ್ರದರ್ಶನಕ್ಕೂ ಆಗಸ್ಟ್ 8ರಂದು ತಡೆಯೊಡ್ಡಲಾಗಿದೆ.

ಭಾರತದ ಪ್ರತಿಕ್ರಿಯೆ
ಪಾಕಿಸ್ತಾನದ ಈ ನಿರ್ಧಾರ ಏಕಪಕ್ಷೀಯ.ನಮ್ಮ ಜತೆ ಮಾತನಾಡದೆಯೇ ಅವರು ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಬಗ್ಗೆ ಅವಲೋಕನ ನಡೆಸುವಂತೆ ನಾವು ಮನವಿ ಮಾಡಿದ್ದೇವೆ ಎಂದು ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.