ADVERTISEMENT

‘ಭಾರತಕ್ಕಿಂತ ಹೆಚ್ಚು ಅಣ್ವಸ್ತ್ರ ಸಿಡಿತಲೆ ಪಾಕ್‌ನಲ್ಲಿವೆ’

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 18:39 IST
Last Updated 19 ಜೂನ್ 2018, 18:39 IST
ಅಣ್ವಸ್ತ್ರ ಸಿಡಿತಲೆ
ಅಣ್ವಸ್ತ್ರ ಸಿಡಿತಲೆ   

ಲಂಡನ್: ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದುವ ವಿಚಾರದಲ್ಲಿ ಪಾಕಿಸ್ತಾನವು ಭಾರತವನ್ನು ಹಿಂದಿಕ್ಕಿದೆ ಎಂದು ಸ್ವೀಡನ್‌ನ ‘ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ (ಎಸ್‌ಐಪಿಆರ್‌ಐ) ತನ್ನ ವಾರ್ಷಿಕ ಪರಮಾಣು ಶಕ್ತಿ ಅಂಕಿ–ಅಂಶಗಳನ್ನು ಬಹಿರಂಗಪಡಿಸಿದೆ.

ಈ ವರ್ಷ ಪಾಕಿಸ್ತಾನದ ಬಳಿ 140ರಿಂದ 150 ಅಣ್ವಸ್ತ್ರ ಸಿಡಿತಲೆಗಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸದಾಗಿ 10 ಸಿಡಿತಲೆಗಳು ಸೇರ್ಪಡೆಯಾಗಿವೆ. ಭಾರತವು 130–140ನ್ನು ಮಾತ್ರ ಹೊಂದಲು ಸಾಧ್ಯವಾಗಿದೆ ಎಂದು ವರದಿ ಹೇಳಿದೆ.

ಭಾರತ ಹಾಗೂ ಪಾಕಿಸ್ತಾನಗಳೆರಡೂ ತಮ್ಮ ಪರಮಾಣು ಅಸ್ತ್ರಗಳ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ. ಭೂ ಮೇಲ್ಮೈ, ಆಗಸ ಹಾಗೂ ಸಮುದ್ರದ ಮೇಲೆ ಕಾರ್ಯಾಚರಿಸಬಲ್ಲ ಹೊಸ ಕ್ಷಿಪಣಿವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿವೆ.

ADVERTISEMENT

‘ಪರಮಾಣು ಶಸ್ತ್ರಾಸ್ತ್ರ ಆಧುನೀಕರಣ ಪ್ರಕ್ರಿಯೆಯನ್ನು ಚೀನಾ ಮುಂದುವರಿಸಿದ್ದು, ಸಲಕರಣೆಗಳ ದಾಸ್ತಾನನ್ನು ಕ್ರಮೇಣ ಹೆಚ್ಚಿಸಿಕೊಳ್ಳುತ್ತಿದೆ’ ಎಂದು ವರದಿ ಅಭಿಪ್ರಾಯಪಟ್ಟಿದೆ.

ಒಟ್ಟು ಅಣ್ವಸ್ತ್ರ ಸಿಡಿತಲೆಗಳಲ್ಲಿ ಅಮೆರಿಕ ಹಾಗೂ ರಷ್ಯಾಗಳ ಪಾಲು ಶೇ 92. ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ ಇಸ್ರೇಲ್ ಹಾಗೂ ಉತ್ತರ ಕೊರಿಯಾಗಳ ಬಳಿ 14,465 ಸಿಡಿತಲೆಗಳಿವೆ. ಈ ಪೈಕಿ 3750ನ್ನು ಈಗಾಗಲೇ ನಿಯೋಜಿಸಲಾಗಿದೆ.

ಯಾರ ಬಳಿ ಎಷ್ಟಿವೆ?

ದೇಶ ಅಣ್ವಸ್ತ್ರ ಸಿಡಿತಲೆ

ಫ್ರಾನ್ಸ್ -300

ಚೀನಾ -280

ಬ್ರಿಟನ್ -215

ಇಸ್ರೇಲ್ -80

ಉ. ಕೊರಿಯಾ 10–20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.