ADVERTISEMENT

ಜಮ್ಮು ಕಾಶ್ಮೀರ, ಗುಜರಾತಿನ ಭೂಭಾಗವಿರುವ ಪಾಕ್ ಭೂಪಟ ಟ್ವೀಟಿಸಿದ ಇಮ್ರಾನ್ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2020, 15:50 IST
Last Updated 4 ಆಗಸ್ಟ್ 2020, 15:50 IST
ಪಾಕ್- ಭಾರತ ಧ್ವಜ
ಪಾಕ್- ಭಾರತ ಧ್ವಜ   

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರ, ಗುಜರಾತಿನ ಕೆಲವು ಭೂಭಾಗಗಳನ್ನುಹೊಂದಿರುವ ಪಾಕಿಸ್ತಾನದ ಹೊಸ ರಾಜಕೀಯ ಭೂಪಟವನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಬಿಡುಗಡೆ ಮಾಡಿರುವುದಾಗಿ ಟ್ವೀಟಿಸಿದ್ದಾರೆ.

ಮಂಗಳವಾರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ ಇದು ಐತಿಹಾಸಿಕ ದಿನ. ಈ ಭೂಪಟವನ್ನೇ ಶಾಲೆ, ಕಾಲೇಜು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಿಸಲಾಗುವುದು. ಈ ಭೂಪಟವನ್ನು ಪಾಕಿಸ್ತಾನ, ಕಾಶ್ಮೀರದ ರಾಜಕೀಯ ನಾಯಕರು ಮಾತ್ರವಲ್ಲದೆ ವಿಪಕ್ಷ ನಾಯಕರು ಅಂಗೀಕರಿಸಿದ್ದಾರೆ ಮತ್ತು ಶ್ಲಾಘಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಭೂಪಟದಲ್ಲಿನ ಬದಲಾವಣೆ ಮತ್ತು ಸೇರ್ಪಡೆಗಳನ್ನು ಎತ್ತಿ ತೋರಿಸುವಾಗ ಪಾಕಿಸ್ತಾನ ಎಲ್ಲಿದೆ ಎಂಬುದನ್ನು ಇದು ಜಗತ್ತಿಗೇ ತೋರಿಸುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದ ಭೌಗೋಳಿಕ ಪ್ರದೇಶವನ್ನು ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಅಥವಾ ಭಾರತ ಆಕ್ರಮಿತ ಕಾಶ್ಮೀರ ಎಂದು ಹೇಳುವ ಬದಲು ಐಐಒಜೆಕೆ (ಭಾರತ ಕಾನೂನುಬಾಹಿರವಾಗಿ ಅತಿಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ) ಎಂದು ಗುರುತಿಸಲಾಗುವುದು ಎಂದು ಪಾಕ್ ಸರ್ಕಾರ ಹೇಳಿದೆ.

ಈಹಿಂದೆಯೇಆಗಸ್ಟ್ 5ನೇ ತಾರೀಖನ್ನು ಯೋಮ್ ಎ ಇತೇಸಲ್ ಎಂದು ಆಚರಿಸಲುಪಾಕಿಸ್ತಾನ ಸರ್ಕಾರ ಸೂಚಿಸಿತ್ತು.

ಭಾರತೀಯ ಮಿಲಿಟರಿ ಕಾನೂನುಬಾಹಿರವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಆಕ್ರಮಿಸಿಕೊಂಡು ಆಗಸ್ಟ್ 5ಕ್ಕೆ ಒಂದು ವರ್ಷವಾಗುತ್ತದೆ. ಆ ದಿನವನ್ನುಯೋಮ್ ಎ ಇತೇಸಲ್ ಎಂದು ಆಚರಿಸಲಾಗುವುದು ಎಂಬುದಾಗಿಎರಡು ದಿನಗಳ ಹಿಂದೆಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ವಿಡಿಯೊವೊಂದನ್ನು ಶೇರ್ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.