ADVERTISEMENT

ಮಾಜಿ ಪ್ರಧಾನಿ ನವಾಜ್‌ ಷರೀಫ್‌ಗೆ ತುರ್ತು ಪಾಸ್‌ಪೋರ್ಟ್

ತಾಯ್ನಾಡಿಗೆ ಮರಳಲು ಹಾಲಿ ಸಹೋದರ ಶಾಹಬಾಝ್ ಸರ್ಕಾರದಿಂದ ಸಹಕಾರ

ಪಿಟಿಐ
Published 25 ಏಪ್ರಿಲ್ 2022, 16:04 IST
Last Updated 25 ಏಪ್ರಿಲ್ 2022, 16:04 IST
ನವಾಜ್ ಷರೀಫ್, ಪಾಕಿಸ್ತಾನ ಮಾಜಿ ಪ್ರಧಾನಿ
ನವಾಜ್ ಷರೀಫ್, ಪಾಕಿಸ್ತಾನ ಮಾಜಿ ಪ್ರಧಾನಿ   

ಇಸ್ಲಾಮಾಬಾದ್: ಬ್ರಿಟನ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ತಾಯ್ನಾಡು ಪಾಕಿಸ್ತಾನಕ್ಕೆ ಬರಲು ಹೊಸ ಸರ್ಕಾರ ಪಾಸ್‌ಪೋರ್ಟ್ ನೀಡಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಹಾಲಿ ಪ್ರಧಾನಿ ಶಾಹಬಾಝ್ ಷರೀಫ್ ಅವರು ನವಾಜ್ ಷರೀಫ್ ಅವರ ಕಿರಿಯ ಸೋದರ.

ನೂತನ ಪ್ರಧಾನಿ ಶಾಹಬಾಝ್ ಷರೀಫ್ ಅವರ ಸರ್ಕಾರವು, ನವಾಜ್ ಷರೀಫ್ ಅವರಿಗೆ ಪಾಸ್‌ಪೋರ್ಟ್ ನೀಡಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯುನ್ ಪತ್ರಿಕೆ ವರದಿ ಮಾಡಿದೆ. ಅಲ್ಲದೆ ನವಾಜ್ ಷರೀಪ್ ಅವರಿಗೆ ಸಾಮಾನ್ಯ ಪಾಸ್‌ಪೋರ್ಟ್ ನೀಡಲಾಗಿದೆ ಎಂದು ಜಿಯೊ ನ್ಯೂಸ್ ತಿಳಿಸಿದೆ.

72 ವರ್ಷದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧದ ಹಲವು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರವು ತನಿಖೆ ಕೈಗೊಂಡಿತ್ತು. 2019ರಲ್ಲಿ ಚಿಕಿತ್ಸೆಗಾಗಿ 4 ವಾರಗಳ ಕಾಲ ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್ ಅವರಿಗೆ ಅನುಮತಿ ನೀಡಿತ್ತು. ಇದಾದ ಬಳಿಕ ಅವರು ಲಂಡನ್‌ಗೆ ಹೋಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.