ಕ್ವೆಟ್ಟಾ: ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಅಫ್ಗಾನಿಸ್ತಾನದ ಪ್ರಜೆಗಳನ್ನು ತ್ವರಿತವಾಗಿ ಗಡೀಪಾರು ಮಾಡಲು ಪಾಕಿಸ್ತಾನವು ಗಡಿಯಲ್ಲಿ ಸೋಮವಾರ ಮೂರು ಹೊಸ ದ್ವಾರಗಳನ್ನು ತೆರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ನೆಲೆಸಲು ಅಗತ್ಯ ದಾಖಲೆಗಳನ್ನು ಒದಗಿಸಲು ವಿಫಲವಾಗುವ ವಿದೇಶಿಗರನ್ನು ಬಂಧಿಸಿ, ಅವರ ದೇಶಕ್ಕೆ ಗಡೀಪಾರು ಮಾಡುವ ಕಾರ್ಯಾಚರಣೆ ಕೈಗೊಂಡ ಬಳಿಕ ಈವರೆಗೆ ಸುಮಾರು 3 ಲಕ್ಷ ಮಂದಿ ಪಾಕಿಸ್ತಾನದಿಂದ ಹೊರಹೋಗಿದ್ದಾರೆ.
ಅನ್ಯ ದೇಶಗಳ ಪ್ರಜೆಗಳನ್ನು ಹೊರಹಾಕುವ ಪಾಕಿಸ್ತಾನದ ಕ್ರಮದಿಂದಾಗಿ, ಇಲ್ಲಿ ನೆಲೆ ಕಂಡುಕೊಂಡಿದ್ದ ಅಫ್ಗಾನಿಸ್ತಾನದ ಪ್ರಜೆಗಳ ಮೇಲೆ ಹೆಚ್ಚು ಪರಿಣಾಮವಾಗಿದೆ. ಪಾಕಿಸ್ತಾನದ ಈ ಕ್ರಮಕ್ಕೆ ತಾಲಿಬಾನ್ ನೇತೃತ್ವದ ಅಫ್ಗಾನಿಸ್ತಾನದ ಸರ್ಕಾರ ಮತ್ತು ಮಾನವ ಹಕ್ಕುಗಳ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.