ADVERTISEMENT

ಕರ್ತಾರ್‌ಪುರ್‌ ಕಾರಿಡಾರ್‌ಗೆ ರಾಯಭಾರಿ ನೇಮಿಸಿದ ಪಾಕ್‌

ಪಿಟಿಐ
Published 1 ಮಾರ್ಚ್ 2023, 16:05 IST
Last Updated 1 ಮಾರ್ಚ್ 2023, 16:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಸಿಖ್ಖರ ಪವಿತ್ರ ಯಾತ್ರಾ ಸ್ಥಳವಾದ ಗುರುದ್ವಾರ ದರ್ಬಾರ್‌ ಸಾಹಿಬ್‌ ಸಂಪರ್ಕಿಸುವ ಕರ್ತಾರ್‌ಪುರ್‌ ಕಾರಿಡಾರ್‌ಗೆ ಸರ್ದಾರ್ ರಮೆಶ್ ಸಿಂಗ್ ಅರೋರಾ ಅವರನ್ನು ರಾಯಭಾರಿಯಾಗಿ ಪಾಕಿಸ್ತಾನ ಸರ್ಕಾರ ನೇಮಿಸಿದೆ.

ಜಗತ್ತಿನಾದ್ಯಂತ ಇರುವ ಸಿಖ್‌ ಯಾತ್ರಿಕರನ್ನು ಈ ಯಾತ್ರಾ ಸ್ಥಳಕ್ಕೆ ಸೆಳೆಯುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್ ಷರೀಫ್ ಅವರು ಈ ನೇಮಕ ಮಾಡಿದ್ದಾರೆ ಎಂದು ಬುಧವಾರ ಹೊರಡಿಸಿದ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದೆ.

ನರೋವಾಲ್‌ನ ಕರ್ತಾರ್‌ಪುರದವರಾದ ಅರೋರಾ ಅವರು ‌ಪಾಕಿಸ್ತಾನ ಮುಸ್ಲಿಂ ಲೀಗ್‌ನ ಅಲ್ಪಸಂಖ್ಯಾತರ ವಿಭಾಗದ ಕೇಂದ್ರ ಪ್ರಧಾನ ಕಾರ್ಯದರ್ಶಿ(ಎನ್‌) ಆಗಿಯೂ ಕೆಲಸ ಮಾಡುತ್ತಿದ್ದಾರೆ. ಅರೋರಾ ಅವರ ಕುಟುಂಬವು ಕರ್ತಾರ್‌ಪುರ್‌ನ ಸಿಖ್ ಪವಿತ್ರ ತಾಣಗಳ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.