ಇಸ್ಲಾಮಾಬಾದ್:‘ಜಮ್ಮು–ಕಾಶ್ಮೀರವಿಶೇಷ ಸ್ಥಾನಮಾನ ರದ್ದತಿ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಭಾರತಕ್ಕೆ ಬೆಂಬಲಿಸಿದರೆ, ಮುಸ್ಲೀಮರು ದಂಗೆ ಏಳಬೇಕಾಗುತ್ತದೆ’ ಎಂದು ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಭಾರತ ಗುರುವಾರ ತನ್ನ 73ನೇ ಸ್ವಾಂತತ್ರ್ಯೋತ್ಸವವನ್ನು ಆಚರಿಸಿದೆ. ಈ ವೇಳೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟ್ಟಿಟ್ಟರ್‌ನಲ್ಲಿಭಾರತದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ವಿರುದ್ಧ ಸಿಡಿದೆದ್ದ ಪಾಕಿಸ್ತಾನಕ್ಕೆ ಯಾರ ಬೆಂಬಲವೂ ಸಿಗಲಿಲ್ಲ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಿರಂತರ ನಿರ್ಲಕ್ಷ್ಯದ ನಂತರಇಮ್ರಾನ್ ಖಾನ್, ‘ಮುಸ್ಲಿಂ ತೀವ್ರಗಾಮಿ ತನ, ಹಿಂಸೆ ಸೇರಿ ಅನೇಕ ಪರಿಣಾಮಗಳನ್ನು ಇತರೆ ದೇಶಗಳು ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆಯೊಡ್ಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಈಗಿನ ಪರಿಸ್ಥಿತಿಯನ್ನು 1995ರ ಸ್ರೆಬ್ರೆನಿಕಾ ಹತ್ಯಾಕಾಂಡಕ್ಕೆ ಅವರು ಹೋಲಿಸಿದರು. ‘ಭಾರತದ ವಿರುದ್ಧ ವಿಶ್ವ ಒಂದಾಗಬೇಕು. ಅದು ತನ್ನ ನಡೆಯಿಂದ ಹಿಂದೆ ಸರಿಯುವಂತೆ ಒತ್ತಡ ಹೇರಬೇಕು’ಎಂದು ಒತ್ತಾಯಿಸಿದ್ದಾರೆ.
‘ಭಾರತ ಆಕ್ರಮಿತ ಕಾಶ್ಮೀರದಲ್ಲಿ (ಐಒಕೆ) ಕಳೆದ 12 ದಿನಗಳಿಂದ ಕರ್ಫ್ಯೂ ಜಾರಿಯಲ್ಲಿದೆ. ಜೊತೆಗೆ ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಆರ್‌ಎಸ್‌ಎಸ್ ಗೂಂಡಾಗಳನ್ನು ಅಲ್ಲಿಗೆ ಕಳಿಸಲಾಗುತ್ತಿದೆ. ಸಂವಹನದ ಎಲ್ಲಾ ಹಾದಿಗಳನ್ನೂ ಮುಚ್ಚಲಾಗಿದೆ. ಈ ಜಗತ್ತು ಇನ್ನೊಂದು ಹತ್ಯಾಕಾಂಡವನ್ನು ಮೌನವಾಗಿಯೇ ವೀಕ್ಷಿಸಲು ಕಾದು ಕುಳಿತಿದೆಯೇ? ಹಾಗೇನಾದರೂ ಆದರೆ,ಮುಸ್ಲೀಮರ ತೀವ್ರ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ’ಎಂದುಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.