ಇಸ್ಲಾಮಾಬಾದ್: ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಕ್ರಮವಾಗಿ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕೆಂಪು ರತ್ನಗಂಬಳಿಯನ್ನು ಬಳಸುವ ಪರಿಪಾಟಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ನಿಷೇಧ ಹೇರಿದ್ದಾರೆ.
ಸರ್ಕಾರದ ಸಂಪುಟ ವಿಭಾಗವು, ‘ಕೆಂಪು ರತ್ನಗಂಬಳಿಯನ್ನು ಇನ್ನು ರಾಜತಾಂತ್ರಿಕ ಸ್ವಾಗತ ಕಾರ್ಯಕ್ರಮಗಳಲ್ಲಷ್ಟೇ ಬಳಸಬಹುದು; ಸಚಿವರು, ಸರ್ಕಾರಿ ಅಧಿಕಾರಿಗಳಿಗೆ ಸ್ವಾಗತಕೋರಲು ಬಳಸುವಂತಿಲ್ಲ‘ ಎಂದು ಆದೇಶ ಹೊರಡಿಸಿದೆ.
ಪಾಕಿಸ್ತಾನ ಸದ್ಯ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ, ಇದೇ ಸಂಪನ್ಮೂಲವನ್ನು ಅನಿವಾರ್ಯ ಉದ್ದೇಶಗಳಿಗೆ ಬಳಸುವುದು ಇದರ ಉದ್ದೇಶವಾಗಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.