ADVERTISEMENT

ಸಾರ್ಕ್‌ ಪುನಶ್ಚೇತನಕ್ಕೆ ಪಾಕ್ ಸಿದ್ಧ: ಅಧ್ಯಕ್ಷ ಷರೀಫ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 12:44 IST
Last Updated 9 ಡಿಸೆಂಬರ್ 2022, 12:44 IST
ಸಾರ್ಕ್‌ ದೇಶಗಳ ಬಾವುಟ
ಸಾರ್ಕ್‌ ದೇಶಗಳ ಬಾವುಟ   

ಇಸ್ಲಾಮಾಬಾದ್‌: ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್‌) ಪುನಶ್ಚೇತನಕ್ಕಾಗಿ ತನ್ನ ಪಾತ್ರ ನಿರ್ವಹಿಸಲು ‍‍ಪಾಕಿಸ್ತಾನ ಸಿದ್ಧವಾಗಿದೆ ಎಂದು ಪಾಕ್ ಅಧ್ಯಕ್ಷ ಶೆಹಬಾಜ್ ಷರೀಫ್‌ ಗುರುವಾರ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಸಾರ್ಕ್‌ ಚಾರ್ಟರ್‌ ದಿನವಾದ ಗುರುವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ದಿನವು ದಕ್ಷಿಣ ಏಷ್ಯಾದ ದೇಶಗಳ ನಡುವೆ ಪ್ರಾದೇಶಿಕ ಅಭಿವೃದ್ಧಿ, ಸಂಪರ್ಕ ಮತ್ತು ಸಹಕಾರದ ಅಗಾಧ ಸಾಮರ್ಥ್ಯ ಪೂರ್ಣವಾಗಿ ಬಳಕೆಯಾಗದ್ದನ್ನು ನೆನ‍ಪಿಸುತ್ತದೆ. ಬಳಸಿಕೊಳ್ಳದ ಅವಕಾಶದ ಬಲಿಪಶುಗಳಾಗುತ್ತಿದ್ದಾರೆ ಸಾರ್ಕ್‌ ದೇಶದ ಜನರು. ಈಗ ಸಾರ್ಕ್‌ನ ಪುನಶ್ಚೇತನದಲ್ಲಿ ತನ್ನ ಪಾತ್ರ ನಿರ್ವಹಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದಿದ್ದಾರೆ.

2016ರ ಸೆಪ್ಟೆಂಬರ್‌ 18ರಂದು ಭಾರತದ ಜಮ್ಮು–ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆಪಾಕಿಸ್ತಾನ ಮೂಲದ ಜೈಶ್‌–ಎ–ಮೊಹಮ್ಮದ್‌ ಭಯೋತ್ಪಾದಕರು ನಡೆಸಿದ ದಾಳಿಯಿಂದ ಅದೇ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ19ನೇ ಸಾರ್ಕ್‌ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತ ನಿರಾಕರಿಸಿತ್ತು. ನಂತರ ಬಾಂಗ್ಲಾದೇಶ, ಭೂತಾನ್‌ ಮತ್ತು ಅಫ್ಗಾನಿಸ್ತಾನ ದೇಶಗಳು ಕೂಡ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರಿಂದ ಶೃಂಗಸಭೆಯನ್ನು ರದ್ದುಗೊಳಿಸಿ ಮುಂದೂಡಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.