ADVERTISEMENT

ಭಯೋತ್ಪಾದನೆಗೆ ಸಂಬಂಧಿಸಿದ ಜೈಶಂಕರ್‌ ಆರೋಪ ಅಲ್ಲಗಳೆದ ಪಾಕ್‌

ಪಿಟಿಐ
Published 3 ಅಕ್ಟೋಬರ್ 2022, 12:43 IST
Last Updated 3 ಅಕ್ಟೋಬರ್ 2022, 12:43 IST
ಪಾಕ್‌ ಪ್ರಧಾನಿ ಶಹಾಬಾಜ್‌ ಶರೀಫ್‌
ಪಾಕ್‌ ಪ್ರಧಾನಿ ಶಹಾಬಾಜ್‌ ಶರೀಫ್‌    

ಇಸ್ಲಾಮಾಬಾದ್‌ (ಪಿಟಿಐ): ‘ಭಯೋತ್ಪಾದನೆ ಪೋಷಿಸುವಲ್ಲಿ ಪಾಕಿಸ್ತಾನವು ಇತರ ರಾಷ್ಟ್ರಗಳಿಗಿಂತಲೂ ಮುಂಚೂಣಿಯಲ್ಲಿದೆ. ಆ ದೇಶವು ಅಂತರರಾಷ್ಟ್ರೀಯ ಭಯೋತ್ಪಾದನೆಗೆ ಹೆಸರುವಾಸಿಯಾಗಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ನೀಡಿದ್ದ ಹೇಳಿಕೆಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸೋಮವಾರ ತಳ್ಳಿ ಹಾಕಿದೆ.

ವಡೋದರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜೈಶಂಕರ್‌, ‘ಪಾಕಿಸ್ತಾನದಂತೆ ಬೇರೆ ಯಾವ ರಾಷ್ಟ್ರವೂ ಭಯೋತ್ಪಾದನೆ ಉತ್ತೇಜಿಸುತ್ತಿಲ್ಲ’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕ್‌ ವಿದೇಶಾಂಗ ಸಚಿವಾಲಯ, ‘ಜೈಶಂಕರ್‌ ಅವರ ಹೇಳಿಕೆಯು ಬೇಜವಾಬ್ದಾರಿತನದಿಂದ ಕೂಡಿದೆ. ಅಂತರರಾಷ್ಟ್ರೀಯ ಸಮುದಾಯದ ದಾರಿ ತಪ್ಪಿಸುವಂತಿದೆ’ ಎಂದು ದೂರಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.