ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕೋವಿಡ್‌ನ ನಾಲ್ಕನೇ ಅಲೆಯನ್ನು ನಿಯಂತ್ರಿಸಲು ತೀವ್ರ ಪ್ರಯತ್ನ ನಡೆದಿರುವಂತೆಯೇ, ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹೀಬ್‌ಗೆ ಭೇಟಿ ನೀಡುವುದಕ್ಕೆ ಸಿಖ್ ಯಾತ್ರಿಕರಿಗೆಅವಕಾಶ ನೀಡಲಾಗಿದೆ.
ಶನಿವಾರ ಇಲ್ಲಿ ನಡೆದ ನ್ಯಾಷನಲ್ ಕಮಾಂಡ್ ಆ್ಯಂಡ್ ಆಪರೇಷನ್ ಸೆಂಟರ್‌ನ (ಎನ್‌ಸಿಒಸಿ) ಸಭೆಯಲ್ಲಿ ಕರ್ತಾರಪುರ ಮಂದಿರವನ್ನು ಮುಂದಿನ ತಿಂಗಳು ಯಾತ್ರಿಕರಿಗೆ ಮುಕ್ತಗೊಳಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ‘ಡಾನ್’ ಪತ್ರಿಕೆ ವರದಿಮಾಡಿದೆ.
ಸಿಖ್ ಯಾತ್ರಿಕರು ಕೆಲವು ಕಟ್ಟುನಿಟ್ಟಿನ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು, ಎರಡೂ ಡೋಸ್ ಲಸಿಕೆ ಪಡೆದವರು ಮತ್ತು 72 ಗಂಟೆಗಳೊಳಗೆ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಹೊಂದಿರುವವರಿಗೆ ಮಾತ್ರ ಗುರುದ್ವಾರಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.