ADVERTISEMENT

ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದ ಒಪ್ಪಂದವನ್ನು ಭಾರತ ಗೌರವಿಸಲಿ: ಪಾಕಿಸ್ತಾನ

ಪಿಟಿಐ
Published 19 ಸೆಪ್ಟೆಂಬರ್ 2024, 14:53 IST
Last Updated 19 ಸೆಪ್ಟೆಂಬರ್ 2024, 14:53 IST
-
-   

ಇಸ್ಲಾಮಾಬಾದ್: ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದ ಒಪ್ಪಂದಕ್ಕೆ ಮಹತ್ವ ಇದೆ. ಭಾರತ ಕೂಡ ಒಪ್ಪಂದವನ್ನು ಗೌರವಿಸುತ್ತದೆ ಎಂಬ ವಿಶ್ವಾಸ ಹೊಂದಿರುವುದಾಗಿ ಪಾಕಿಸ್ತಾನ ಗುರುವಾರ ಹೇಳಿದೆ.

ಒಪ್ಪಂದ ಮರುಪರಿಶೀಲನೆ ಕುರಿತು ಭಾರತ ನೋಟಿಸ್‌ ನೀಡಿದ್ದಕ್ಕೆ ಪಾಕಿಸ್ತಾನ ಈ ಪ್ರತಿಕ್ರಿಯೆ ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯ ವಕ್ತಾರೆ ಮುಮ್ತಾಜ್‌ ಜಹ್ರಾ ಬಲೂಚ್‌, ‘ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿ ಎರಡೂ ದೇಶಗಳು ನಿರ್ದಿಷ್ಟ ವಿಧಾನ ಅನುಸರಿಸುತ್ತಿವೆ. ನೀರು ಹಂಚಿಕೆ ಕುರಿತ ಯಾವುದೇ ವಿಚಾರಗಳನ್ನು ಒಪ್ಪಂದದಲ್ಲಿನ ಅವಕಾಶಗಳ ಪ್ರಕಾರವೇ ಬಗೆಹರಿಸಿಕೊಳ್ಳಬೇಕು’ ಎಂದರು.

ADVERTISEMENT

‘ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ಗಮನಿಸಿದರೆ, ಒಪ್ಪಂದದ ಮರುಪರಿಶೀಲನೆಗೆ ಪಾಕಿಸ್ತಾನಕ್ಕೆ ಆಸಕ್ತಿ ಇಲ್ಲ ಎಂಬುದು ಗೊತ್ತಾಗುತ್ತದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.