ADVERTISEMENT

ಇಮ್ರಾನ್ ಖಾನ್ ಅಧಿಕಾರಾವಧಿ ಪೂರೈಸಿದರೆ ಪಾಕಿಸ್ತಾನ ದಿವಾಳಿಯಾಗಲಿದೆ: ಭುಟ್ಟೊ

ಏಜೆನ್ಸೀಸ್
Published 21 ಮೇ 2021, 16:31 IST
Last Updated 21 ಮೇ 2021, 16:31 IST
   

ಇಸ್ಲಾಮಾಬಾದ್‌: ಪ್ರಧಾನಿ ಇಮ್ರಾನ್‌ ಖಾನ್‌ ಅವರು ತಮ್ಮ ಅಧಿಕಾರಾವಧಿಯನ್ನು ಪೂರೈಸಿದರೆ ದೇಶವು ದಿವಾಳಿಯಾಗಲಿದೆ ಎಂದು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲವಾಲ್‌ ಭುಟ್ಟೊ ಜರ್ದಾರಿ ಹೇಳಿದ್ದಾರೆ.

ಕೋವಿಡ್‌-19 ಸಾಂಕ್ರಾಮಿಕಕ್ಕೂ ಮೊದಲೇ ದೇಶದ ಆರ್ಥಿಕತೆಯನ್ನು ಪ್ರಧಾನಿ ಹಾಳು ಮಾಡಿದ್ದಾರೆ. ಈಗಿನ ಆಡಳಿತದಿಂದಾಗಿ ಮುಂದಿನ ಸರ್ಕಾರಗಳು ದಶಕಗಳ ವರೆಗೆ ತೊಂದರೆ ಅನುಭವಿಸಬೇಕಾಗುತ್ತದೆ. ದತ್ತಿ ಸಂಸ್ಥೆಯ ಮಾದರಿಯಲ್ಲಿ ದೇಶವನ್ನಾಳುವ ಇಮ್ರಾನ್‌ ಖಾನ್‌ ಯೋಜನೆ ವಿಫಲವಾಗಿದೆ ಎಂದು ಪಿಪಿಪಿ ಮುಖ್ಯಸ್ಥ ಆರೋಪಿಸಿರುವುದಾಗಿ ಡೈಲಿ ಟೈಮ್ಸ್‌ ವರದಿ ಮಾಡಿದೆ.

ಸ್ವಾತಂತ್ರ್ಯದ ನಂತರ ಪಾಕಿಸ್ತಾನದಲ್ಲಿ ಎಲ್ಲ ಪ್ರಧಾನಿಗಳು ಸೇರಿ ಕೂಡಿಸಿದ್ದಕ್ಕಿಂತ ಹೆಚ್ಚು ಹಾನಿಯನ್ನು ಇಮ್ರಾನ್ ಖಾನ್‌ ಒಬ್ಬರೇ ಮಾಡಿದ್ದಾರೆ ಎಂದು ಭುಟ್ಟೊ ಕಿಡಿಕಾರಿದ್ದಾರೆ. ಮುಂದುವರಿದು, ಇಮ್ರಾನ್‌ ಮತ್ತು ಅವರ ಬೆಂಬಲಿಗರು ಹಣ ಲೂಟಿ ಮಾಡಿದ ಬಳಿಕ ಪರ್ವೇಜ್‌ ಮುಷರಫ್‌ ಅವರಂತೆಯೇ ಲಂಡನ್‌ಗೆ ಪಲಾಯನಾ ಮಾಡುತ್ತಾರೆ ಎಂದೂ ಆರೋಪಿಸಿದ್ದಾರೆ.

ADVERTISEMENT

ಆರೋಪ ಮುಂದುವರಿಸಿದ ಭುಟ್ಟೊ,ಯುವಕರ ಭರವಸೆಗಳನ್ನು ಕೊನೆಗಾಣಿಸಿರುವುದುಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮಾಡಿದ ದೊಡ್ಡ ಅಪರಾಧ. ಸದ್ಯ ಪಾಕಿಸ್ತಾನದ ಆರ್ಥಿಕತೆಯು ಗಂಭೀರ ಸ್ಥಿತಿಯಲ್ಲಿದ್ದು, ಕೋವಿಡ್‌-19 ಸಾಂಕ್ರಾಮಿಕವು ಆರ್ಥಿಕ ಬೆಳವಣಿಗೆಯ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.