ಕರಾಚಿ: ದೇಶದಲ್ಲಿ ಭಯತ್ಪಾದಕರ ವಿರುದ್ಧದ ಯುದ್ಧ ಮುಂದುವರಿಯುತ್ತದೆ. ಮೂಲಭೂತವಾದ, ಉಗ್ರವಾದ ಮತ್ತು ಅಸಹಿಷ್ಣುತೆಗೆ ಶರಣಾಗುವುದಿಲ್ಲ ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಖ್ ಕಾಕರ್ ಬುಧವಾರ ಹೇಳಿದ್ದಾರೆ.
ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳ ಬೆಂಗಾವಲು ಪಡೆಯ ಮೇಲೆ ತೆಹಿರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಆರು ಮಂದಿ ಸೈನಿಕರು ಸಾವನ್ನಪ್ಪಿದ ಒಂದು ದಿನದ ನಂತರ ಕಾಕರ್ ಈ ಹೇಳಿಕೆ ನೀಡಿದ್ದಾರೆ.
ಕರಾಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ದಾಳಿಗಳಿಂದ ನಮ್ಮನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಆ ರೀತಿಯ ತಪ್ಪು ಕಲ್ಪನೆ ಬೇಡ. ಹುತಾತ್ಮರು ಮತ್ತು ಅವರ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆಂದು ಡಾನ್ ಪತ್ರಿಕೆ ವರದಿ ಮಾಡಿದೆ.
ತೆರಿಗೆಯಿಂದ ಸಂಗ್ರಹವಾದ ಹಣದಿಂದ ದೇಶ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದೆಯೇ ಹೊರತು ದಾನಿಗಳ ಹಣದಿಂದಲ್ಲ ಎಂದ ಕಾಕರ್, ಆತ್ಮಾಹುತಿ ಬಾಂಬರ್‌ಗಳನ್ನು ‘ನರಕದಲ್ಲಿನ ನಾಯಿಗಳು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.