ADVERTISEMENT

ಭಾರತೀಯ ಸಿಖ್ಖರಿಗೆ ಯುಎಸ್‌ ಡಾಲರ್ ತರುವಂತೆ ಸಲಹೆ

ಪಿಟಿಐ
Published 30 ಸೆಪ್ಟೆಂಬರ್ 2024, 15:30 IST
Last Updated 30 ಸೆಪ್ಟೆಂಬರ್ 2024, 15:30 IST
<div class="paragraphs"><p>ಸಂಗ್ರಹ ಚಿತ್ರ&nbsp;</p></div>

ಸಂಗ್ರಹ ಚಿತ್ರ 

   

ಲಾಹೋರ್‌: ದೇಶಕ್ಕೆ ಭೇಟಿ ನೀಡುವ ಭಾರತೀಯ ಸಿಖ್ಖರಿಗೆ ಭಾರತದ ಕರೆನ್ಸಿ ಬದಲಿಗೆ ಅಮೆರಿಕದ ಡಾಲರ್ ಬಳಸುವಂತೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸರ್ಕಾರವು ಸೋಮವಾರ ಸಲಹೆ ನೀಡಿದೆ.

‘ಪಾಕಿಸ್ತಾನದಲ್ಲಿರುವ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಭಾರತೀಯ ಸಿಖ್ಖರಿಗೆ ಪ್ರಸ್ತುತ ವಿನಿಮಯ ದರಕ್ಕಿಂತ ಕಡಿಮೆ ಕರೆನ್ಸಿ ನೀಡುವ ಮೂಲಕ ಶೋಷಣೆ ಮಾಡಲಾಗುತ್ತಿದೆ ಎಂದು ನಮಗೆ ಹಲವು ದೂರುಗಳು ಬಂದಿವೆ’ ಎಂದು ಪಂಜಾಬ್‌ನ ಮೊದಲ ಸಿಖ್ ಮಂತ್ರಿ ರಮೇಶ್ ಸಿಂಗ್‌ ಅರೋರಾ ಹೇಳಿದರು.

ADVERTISEMENT

ಅರೋರಾ ಅವರು ‘ಪಾಕಿಸ್ತಾನದ ಸಿಖ್ ಗುರುದ್ವಾರ ಪ್ರಬಂಧಕ ಕಮಿಟಿ’ಯ ಅಧ್ಯಕ್ಷರೂ ಆಗಿದ್ದು, ಪಾಕಿಸ್ತಾನಕ್ಕೆ ಭೇಟಿ ನೀಡುವ ಭಾರತೀಯ ಸಿಖ್ಖರು ಸೌಲಭ್ಯಗಳಿಗಾಗಿ ಯಾವುದೇ ಹೆಚ್ಚುವರಿ ಹಣವನ್ನು ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು. 

‘ಗುರುನಾನಕ್ 555ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ನವೆಂಬರ್ 14ರಂದು ಹೆಚ್ಚಿನ ಸಂಖ್ಯೆಯ ಭಾರತೀಯರು ಪಾಕಿಸ್ತಾನಕ್ಕೆ ಆಗಮಿಸಲಿದ್ದಾರೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.