ADVERTISEMENT

ಮುಂಬೈ ದಾಳಿಕೋರ ಉಗ್ರ ಹಫೀಜ್‌ಗೆ 32 ವರ್ಷ ಜೈಲು

ಪಾಕಿಸ್ತಾನದ ಉಗ್ರ ನಿಗ್ರಹ ಕೋರ್ಟ್‌ನಿಂದ ₹3.4 ಲಕ್ಷ ದಂಡ

ಪಿಟಿಐ
Published 8 ಏಪ್ರಿಲ್ 2022, 14:32 IST
Last Updated 8 ಏಪ್ರಿಲ್ 2022, 14:32 IST
ಹಫೀಜ್‌ ಸಯೀದ್,
ಹಫೀಜ್‌ ಸಯೀದ್,   

ಲಾಹೋರ್(ಪಿಟಿಐ): ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಮತ್ತೆರಡು ಪ್ರಕರಣಗಳಲ್ಲಿ ಮುಂಬೈ ದಾಳಿಯ(26/11) ಪ್ರಮುಖ ಸೂತ್ರಧಾರಿ ಹಫೀಜ್‌ ಸಯೀದ್‌ಗೆ ಪಾಕಿಸ್ತಾನದ ನ್ಯಾಯಾಲಯ 32 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಎಜಾಜ್ ಅಹ್ಮದ್ ಭುಟ್ಟರ್ ಅವರು, ಹಫೀಜ್‌ ಸಯೀದ್‌ಗೆ32 ವರ್ಷ ಜೈಲು ಶಿಕ್ಷೆ ಹಾಗೂ ₹3.4 ಲಕ್ಷ ದಂಡ ವಿಧಿಸಿ, ಆದೇಶಿಸಿದರು.

ಈಗಾಗಲೇ ಇಂಥ 5 ಪ್ರಕರಣಗಳಲ್ಲಿ ಹಫೀಜ್‌ 36 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಒಟ್ಟಾರೆ 68 ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾದಂತಾಗಿದೆ.

ADVERTISEMENT

ವಿಶ್ವಸಂಸ್ಥೆಯಿಂದ ಉಗ್ರ ಎಂದು ಘೋಷಿಸಲ್ಪಟ್ಟಿರುವ ಹಫೀಜ್‌ ತಲೆಗೆ ಅಮೆರಿಕ ಸರ್ಕಾರ ₹75 ಕೋಟಿ (10 ಮಿಲಿಯನ್ ಡಾಲರ್) ಇನಾಮು ಘೋಷಣೆ ಮಾಡಿತ್ತು.

2019ರಲ್ಲಿ ಬಂಧನವಾದ 70 ವರ್ಷದ ಹಫೀಜ್‌,ಆಗಿನಿಂದಲೂ ಕೋಟ್ ಲಕ್‌ಪತ್ ಕಾರಾಗೃಹದಲ್ಲಿದ್ದಾನೆ.

2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಅಮೆರಿಕದ 6 ನಾಗರಿಕರು ಸೇರಿದಂತೆ 166 ಮಂದಿ ಬಲಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.