ADVERTISEMENT

ಫೇಸ್‌ಬುಕ್‌ನಿಂದ ಸುದ್ದಿ ಪ್ರಸಾರಕ್ಕೆ ತಡೆ: ಪಾಕ್‌

ಪಿಟಿಐ
Published 30 ಡಿಸೆಂಬರ್ 2019, 19:45 IST
Last Updated 30 ಡಿಸೆಂಬರ್ 2019, 19:45 IST
   

ಇಸ್ಲಾಮಾಬಾದ್: ‘ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ತನ್ನ ಸುದ್ದಿಯ ನೇರ ಪ್ರಸಾರವನ್ನು ಫೇಸ್‌ಬುಕ್‌ ನಿರ್ಬಂಧಿಸಿದೆ’ ಎಂದು ಪಾಕಿಸ್ತಾನ ಪ್ರಸಾರ ನಿಗಮ (ಪಿಬಿಸಿ) ಸೋಮವಾರ ಆರೋಪಿಸಿದೆ.

ಪಾಕಿಸ್ತಾನ ರೇಡಿಯೊ ಸುದ್ದಿ ಪ್ರಸಾರದ ಮೇಲೂ ಈ ನಿರ್ಬಂಧದ ಪರಿಣಾಮ ಉಂಟಾಗಿದೆ. ಕಿರುಕುಳ, ಕರ್ಫ್ಯೂ, ಮಿಲಿಟರಿ ನಿರ್ಬಂಧ ಸಂಬಂಧಿತ ಸುದ್ದಿಗಳನ್ನು ನಿರ್ಬಂಧಿಸಲಾಗಿದೆ ಎಂದು ರೇಡಿಯೊ ಪಾಕಿಸ್ತಾನ ಹೇಳಿದೆ.

‘ನಿರ್ಬಂಧ ವಿಧಿಸಿರುವುದು ಮಾನವ ಹಕ್ಕಿನ ಉಲ್ಲಂಘನೆ. ನೇರ ಪ‍್ರಸಾರವನ್ನು ಮರುಸ್ಥಾಪಿಸಲು ಸರ್ಕಾರ ಅಗತ್ಯ ಕ್ರಮವಹಿಸಲಿದೆ’ ಎಂದು ಪಾಕಿಸ್ತಾನ ಸರ್ಕಾರದ ಮುಖ್ಯ ವಕ್ತಾರರಾದ ಫಿರ್ದೋಸ್‌ ಆಶಿಕ್‌ ಅವಾನ್‌ ಪ್ರತಿಕ್ರಿಯಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.