ADVERTISEMENT

ಜೆರುಸಲೇಂ ಪವಿತ್ರ ಸ್ಥಳದಲ್ಲಿ ಘರ್ಷಣೆ: 153 ಮಂದಿ ಆಸ್ಪತ್ರೆಗೆ ದಾಖಲು

ಏಜೆನ್ಸೀಸ್
Published 10 ಮೇ 2021, 13:10 IST
Last Updated 10 ಮೇ 2021, 13:10 IST
ಜೆರುಸಲೇಂನ ಓಲ್ಡ್ ಸಿಟಿ ಪ್ರದೇಶದಲ್ಲಿ ಸೋಮವಾರ ಯಹೂದಿ ಚಾಲಕನ ಮೇಲೆ ಹಲ್ಲೆ ಮಾಡಿದ ಪ್ಯಾಲೇಸ್ಟಿನಿಯನ್ ಪ್ರತಿಭಟನಕಾರನಿಗೆ ಇಸ್ರೇಲ್‌ನ ಪೊಲೀಸ್ ಅಧಿಕಾರಿಯೊಬ್ಬರು ಪಿಸ್ತೂಲು ತೋರಿಸಿ ಬಂಧಿಸಿದರು ಎಪಿ/ಪಿಟಿಐ ಚಿತ್ರ
ಜೆರುಸಲೇಂನ ಓಲ್ಡ್ ಸಿಟಿ ಪ್ರದೇಶದಲ್ಲಿ ಸೋಮವಾರ ಯಹೂದಿ ಚಾಲಕನ ಮೇಲೆ ಹಲ್ಲೆ ಮಾಡಿದ ಪ್ಯಾಲೇಸ್ಟಿನಿಯನ್ ಪ್ರತಿಭಟನಕಾರನಿಗೆ ಇಸ್ರೇಲ್‌ನ ಪೊಲೀಸ್ ಅಧಿಕಾರಿಯೊಬ್ಬರು ಪಿಸ್ತೂಲು ತೋರಿಸಿ ಬಂಧಿಸಿದರು ಎಪಿ/ಪಿಟಿಐ ಚಿತ್ರ   

ಜೆರುಸಲೇಂ: ಇಲ್ಲಿನ ಪವಿತ್ರ ಸ್ಥಳ ಅಲ್ ಅಕ್ಸಾ ಮಸೀದಿ ಆವರಣದಲ್ಲಿ ಸೋಮವಾರ ಪ್ಯಾಲೆ ಸ್ಟೀನಿಯರು ಮತ್ತು ಪೊಲೀಸರ ನಡುವೆ ಘರ್ಷಣೆಯಲ್ಲಿ ಕನಿಷ್ಠ 215 ಪ್ಯಾಲೆ ಸ್ಟೀನಿಯರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 153 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ಯಾಲೆ ಸ್ಟೀನಿಯನ್ನರ ಮೇಲೆ ಇಸ್ರೇಲಿ ಪೊಲೀಸರು ಅಶ್ರುವಾಯು, ಗ್ರನೇಡ್ ಹಾಗೂ ರಬ್ಬರ್ ಲೇಪಿತ ಗುಂಡುಗಳನ್ನು ಪ್ರಯೋಗಿಸಿದರು. ಇದಕ್ಕೆ ಪ್ರತಿಯಾಗಿ ಪ್ಯಾಲೆಸ್ಟೀನಿಯರು ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದರು. ಇದರಿಂದಾಗಿ ಹಲವರು ಗಾಯಗೊಂಡರು.

ಆಸ್ಪತ್ರೆಗೆ ದಾಖಲಾದ 153 ಪ್ಯಾಲೆ ಸ್ಟೀನಿಯನ್ನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಘರ್ಷಣೆಯಲ್ಲಿ 9 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಒಬ್ಬ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ಪೂರ್ವ ಜೆರುಸಲೇಂನ ಶೇಖ್ ಜರಾ ಆಸುಪಾಸಿನ ಪ್ರದೇಶಗಳಲ್ಲಿ ನೆಲೆಸಿರುವ ಪ್ಯಾಲೆಸ್ಟೀನಿಯನ್‌ ಕುಟುಂಬಗಳನ್ನು ಬಲವಂತವಾಗಿ ಹೊರದಬ್ಬಲು ಇಸ್ರೇಲ್ ನಿರತವಾಗಿದೆ. ಇದನ್ನು ವಿರೋಧಿಸಿ ಪ್ಯಾಲೆ ಸ್ಟೀನಿಯನ್ನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.