ವಿಶ್ವಸಂಸ್ಥೆ: ‘ಯುದ್ಧ ನಿಲ್ಲಿಸಿ ಮತ್ತು ಜನರ ಜೀವ ಉಳಿಸಿ’ ಎಂದು ಪ್ಯಾಲೆಸ್ಟೀನ್‌ನ ರಾಯಭಾರಿ ರಿಯಾದ್ ಮನ್ಸೌರ್ ಗುರುವಾರ ವಿಶ್ವಸಂಸ್ಥೆಯ ಸಭೆಯಲ್ಲಿ ಮನವಿ ಮಾಡಿದರು. ಆದರೆ ಇಸ್ರೇಲ್‌ನ ರಾಜತಾಂತ್ರಿಕ ಅಧಿಕಾರಿ ‘ಹಮಾಸ್ ಬಂಡುಕೋರರು ನಿರ್ನಾಮವಾಗುವವರೆಗೆ ನಾವು ವಿರಮಿಸುವುದಿಲ್ಲ ಎಂದು ಮತ್ತೆ ಘೋಷಿಸಿದರು.
ಇಸ್ರೇಲ್ ದಾಳಿ ಕುರಿತಂತೆ ಸಾಮಾನ್ಯ ಸಭೆಯ ತುರ್ತು ವಿಶೇಷ ಸಭೆಯಲ್ಲಿ ಗುರುವಾರ ಕದನ ವಿರಾಮ ಘೋಷಿಸಬೇಕೆಂಬ ಅರಬ್ ರಾಷ್ಟ್ರಗಳ ನಿರ್ಣಯವನ್ನು ಭಾಷಣಕಾರರು ಬೆಂಬಲಿಸಿದರು. ಆದರೆ ವಿಶ್ವಸಂಸ್ಥೆಯಲ್ಲಿರುವ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡನ್ ಅವರು ‘ಕದನ ವಿರಾಮ ಎಂದರೆ ಶಸ್ತ್ರಸಜ್ಜಿತರಾಗಲು ಹಮಾಸ್ ಬಂಡುಕೋರರಿಗೆ ಮತ್ತೆ ಸಮಯ ನೀಡಿದಂತೆ. ಆಗ ಅವರು ಮತ್ತೆ ನಮ್ಮನ್ನು ಕೊಲ್ಲುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.