ADVERTISEMENT

ಪ್ಯಾರಿಸ್‍ನಲ್ಲಿ ಆಗಂತುಕನಿಂದ ಚಾಕು ಇರಿತ: 7 ಮಂದಿಗೆ ಗಾಯ 

ಏಜೆನ್ಸೀಸ್
Published 10 ಸೆಪ್ಟೆಂಬರ್ 2018, 1:14 IST
Last Updated 10 ಸೆಪ್ಟೆಂಬರ್ 2018, 1:14 IST
ಕೃಪೆ: ರಾಯಿಟರ್ಸ್
ಕೃಪೆ: ರಾಯಿಟರ್ಸ್   

ಪ್ಯಾರಿಸ್: ಆಗಂತುಕನೊಬ್ಬಚಾಕು ಮತ್ತು ಕಬ್ಬಿಣದ ಸರಳುಗಳಿಂದಜನರ ಮೇಲೆ ಏಕಾಏಕಿದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ಬ್ರಿಟಿಷ್ ಪ್ರವಾಸಿಗಳು ಸೇರಿದಂತೆ ಏಳು ಮಂದಿಗೆ ಗಾಯಗಳಾಗಿವೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.

ದಾಳಿಕೋರನನ್ನು ಬಂಧಿಸಿದ್ದು, ಈತ ಅಫ್ಘಾನ್ ದೇಶದವನು ಎಂದು ಶಂಕಿಸಲಾಗಿದೆ.

ರಸ್ತೆಯಲ್ಲಿರುವ ಅಪರಿಚಿತ ವ್ಯಕ್ತಿಗಳ ಮೇಲೆ ಈ ದಾಳಿ ನಡೆದಿದ್ದು, ಇದು ಭಯೋತ್ಪಾದನಾ ಕೃತ್ಯ ಎಂದು ಈ ಹೊತ್ತಿನಲ್ಲಿ ಹೇಳಲಾಗದು ಎಂದಿದ್ದಾರೆ ಪೊಲೀಸರು. ದಾಳಿಗೊಳಗಾದ ಏಳು ಮಂದಿಯಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಭಾನುವಾರ ರಾತ್ರಿ 11 ಗಂಟೆಗೆ ಪ್ಯಾರಿಸ್‍ನ ಈಶಾನ್ಯ ಭಾಗದಲ್ಲಿರುವ ಕಾನಲ್ ಡೆಲ್ಯೂಕ್ ಬಳಿ ಈ ಘಟನೆ ನಡೆದಿದ್ದು, ತನಿಖೆ ಮುಂದುವರಿದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.