ವಾಷಿಂಗ್ಟನ್: ಸೂರ್ಯನಮೇಲ್ಮೈ ಅಧ್ಯಯನಕ್ಕಾಗಿ ಉಡಾಯಿಸಲಾಗಿದ್ದ ಸೋಲಾರ್ ಪಾರ್ಕರ್ ಬಾಹ್ಯಾಕಾಶ ನೌಕೆಯು ತನ್ನ ಮೊದಲ ಸುತ್ತನ್ನು ಯಶಸ್ವಿಯಾಗಿ ಪೂರೈಸಿದ್ದು, ಎರಡನೇ ಪ್ರದಕ್ಷಿಣೆಯನ್ನು ಆರಂಭಿಸಿದೆ ಎಂದು ನಾಸಾ ತಿಳಿಸಿದೆ.
ಉಡಾವಣೆಗೊಂಡ 161 ದಿನಗಳಲ್ಲಿ, ಅಂದರೆ ಜನವರಿ 19ರಂದು ಸೂರ್ಯನ ಸುತ್ತ ಮೊದಲ ಪ್ರದಕ್ಷಿಣೆಯನ್ನು ಸೋಲಾರ್ ಪಾರ್ಕರ್ ಪೂರೈಸಿದೆ. ಈ ನೌಕೆಯು ಒಟ್ಟು, 24 ಬಾರಿ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲಿದ್ದು, ಅದರ ಎರಡನೇ ಸುತ್ತು ಈಗ ಆರಂಭವಾಗಿದೆ. ಬರುವ ಏಪ್ರಿಲ್ 4ರಂದು ನೌಕೆಯು, ಮತ್ತೊಮ್ಮೆ ಸೂರ್ಯನ ಅತಿ ಸಮೀಪಕ್ಕೆ ಹೋಗಲಿದೆ ಎಂದು ನಾಸಾ ಹೇಳಿದೆ.
ಮೊದಲ ಸುತ್ತಿನಲ್ಲಿ ‘ಪಾರ್ಕರ್’ ಸೆರೆ ಹಿಡಿದಿರುವ ಚಿತ್ರಗಳು ಮತ್ತು ಮಾಹಿತಿಯನ್ನು ಏಪ್ರಿಲ್ ವೇಳೆಗೆ ಡೌನ್‌ಲೋಡ್ ಮಾಡಿಕೊಳ್ಳಲಾಗುವುದು ಎಂದು ನಾಸಾ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.