ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಕಂಡುಬರುವ ಅಳಿವಿನಂಚಿನ ಕಕಾಪೊ ಗಿಳಿಗಳು ಅಪರೂಪದ ಕಾಯಿಲೆಗೆ ತುತ್ತಾಗುತ್ತಿವೆ ಎಂದು ಸಂಶೋಧಕರು ಹೇಳಿದ್ದಾರೆ.
ವಿಶ್ವದಲ್ಲೆ ದಪ್ಪಗಿನ ಗಿಳಿಗಳು ಎಂಬ ಖ್ಯಾತಿಗೂ ಇವುಗಳು ಪಾತ್ರವಾಗಿವೆ.
ನ್ಯೂಜಿಲೆಂಡ್‌ನ ಕಾಡ್‌ಫಿಶ್ ದ್ವೀಪದಲ್ಲಿರುವ ಗಿಳಿಗಳಲ್ಲಿ ಶಿಲೀಂಧ್ರಗಳಿಂದ ಉಂಟಾಗುವ ಉಸಿರಾಟ ಸಂಬಂಧಿ ಕಾಯಿಲೆ (ಆಸ್ಪರ್ಜಿಲೋಸಿಸ್) ಕಾಣಿಸಿಕೊಂಡಿದೆ ಎಂದೂ ಡಿಪಾರ್ಟ್‌ಮೆಂಟ್ ಆಫ್ ಕನ್ಸರ್ವೇಷನ್‌ನ (ಡಿಒಸಿ) ಸಂಶೋಧಕರು ತಿಳಿಸಿದ್ದಾರೆ.
ಈ ರೋಗ ಕಾಣಿಸಿಕೊಂಡಿರುವ 36 ಗಿಳಿಗಳಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ. ಅವುಗಳಲ್ಲಿ 7 ಗಿಳಿಗಳು ಸಾವನ್ನಪ್ಪಿವೆ ಎಂದೂ ತಿಳಿಸಿದ್ದಾರೆ.
150 ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿವೆ ಎಂದು ತಿಳಿಯಲಾಗಿರುವ ಕಕಾಪೊ ಗಿಳಿಗಳ ಪ್ರಭೇದಕ್ಕೆ ಈ ಕಾಯಿಲೆಯಿಂದ ಅಪಾಯ ಎದುರಾಗಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.