ADVERTISEMENT

ನ್ಯೂಜಿಲೆಂಡ್‌ | ಎಂಜಿನ್‌ನಲ್ಲಿ ಬೆಂಕಿ: ಸುರಕ್ಷಿತವಾಗಿ ಇಳಿದ ವಿಮಾನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 12:47 IST
Last Updated 17 ಜೂನ್ 2024, 12:47 IST
   

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ನಲ್ಲಿ ಸೋಮವಾರ ಪ್ರಯಾಣಿಕ ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ ಎಂದು ರಾಷ್ಟ್ರದ ಅಗ್ನಿಶಾಮಕ ಸೇವಾ ಅಧಿಕಾರಿಗಳು ತಿಳಿಸಿದ್ದಾರೆ. 

ನ್ಯೂಜಿಲೆಂಡ್‌ನ ಕ್ವೀನ್ಸ್‌ಟೌನ್‌ನಿಂದ ಆಸ್ಟ್ರೇಲಿಯಾದ ಮೆಲ್ಬರ್ನ್‌ಗೆ ಹೊರಟಿದ್ದ ವರ್ಜಿನ್‌ ಆಸ್ಟ್ರೇಲಿಯಾ ಬೋಯಿಂಗ್‌ 737– 800 ಪ್ರಯಾಣಿಕ ವಿಮಾನವು ಟೇಕ್‌ ಆಫ್‌ ಆದ ಬಳಿಕ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿತು. 

ವಿಮಾನ ಹಾರಾಟ ಪ್ರಾರಂಭವಾದ 50 ನಿಮಿಷಗಳ ಬಳಿಕ ಅದು ಇನ್ವರ್‌ಕಾರ್ಗಿಲ್ ನಗರದ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು. ಕೂಡಲೇ ಅಗ್ನಿಶಾಮಕ ದಳಗಳು ಆಗಮಿಸಿ ಬೆಂಕಿ ನಂದಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ನಿಖರ ಕಾರಣ ಏನೆಂಬುದು ವರದಿಯಾಗಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.