ADVERTISEMENT

ಬೈಡನ್ ಹಿಂದೆ ಸರಿದಿರುವುದು ಅವರ ದೇಶಭಕ್ತಿಗೆ ಸಾಕ್ಷಿ: ಬರಾಕ್ ಒಬಾಮ

ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬೈಡನ್‌ ನಿರ್ಧಾರ ಸ್ವಾಗತಿಸಿದ ಒಬಾಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2024, 4:14 IST
Last Updated 22 ಜುಲೈ 2024, 4:14 IST
<div class="paragraphs"><p>ಬರಾಕ್ ಒಬಾಮ ಮತ್ತು ಜೋ ಬೈಡನ್</p></div>

ಬರಾಕ್ ಒಬಾಮ ಮತ್ತು ಜೋ ಬೈಡನ್

   

ವಾಷಿಂಗ್ಟನ್: ಜೋ ಬೈಡನ್ ಅವರನ್ನು ಅಪ್ರತಿಮ ದೇಶಭಕ್ತ ಎಂದು ಕರೆದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬೈಡನ್‌ ನಿರ್ಧಾರವನ್ನು ಪ್ರಶಂಸಿಸಿದ್ದಾರೆ.

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಒಬಾಮ, ‘ಅಮೆರಿಕದ ಅಧ್ಯಕ್ಷರಾದ ಪ್ರಮುಖರಲ್ಲಿ ಜೋ ಬೈಡನ್ ಕೂಡ ಒಬ್ಬರು. ಜೊತೆಗೆ ಅವರು ನನ್ನ ಆತ್ಮೀಯ ಸ್ನೇಹಿತ ಕೂಡ ಹೌದು. ಅವರೊಬ್ಬ ಅಪ್ರತಿಮ ದೇಶಭಕ್ತ ಎಂಬುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ಹದಿನಾರು ವರ್ಷದ ಹಿಂದೆ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ಸಾರ್ವಜನಿಕ ಜೀವನದಲ್ಲಿ ಬೈಡನ್‌ ಅವರ ಗಮರ್ನಾಹ ಸೇವೆ ಬಗ್ಗೆ ನನ್ನ ಗಮನ ಸೆಳೆದಿತ್ತು. ಆದರೆ ನನಗೆ ಹೆಚ್ಚು ಮೆಚ್ಚುಗೆಯಾಗಿದ್ದು, ಅವರ ಸಹಾನುಭೂತಿ ಮತ್ತು ಕಷ್ಟಪಟ್ಟು ಗಳಿಸಿದ ಸ್ಥಾನ. ಅಧಿಕಾರ ವಹಿಸಿಕೊಂಡ ನಂತರವೂ ಬೈಡನ್ ಅದನ್ನು ಸಾಬೀತು ಮಾಡಿದ್ದರು’ ಎಂದು ಹೇಳಿದ್ದಾರೆ.

‘ಸಾಂಕ್ರಾಮಿಕ ರೋಗ ಕೋವಿಡ್ ಅನ್ನು ಕೊನೆಗೊಳಿಸುವಲ್ಲಿ, ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಬೈಡನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಿಸ್ಕ್ರಿಪ್ಷನ್ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಿದ್ದಲ್ಲದೆ, 30 ವರ್ಷಗಳ ನಂತರ ಗನ್ ಸುರಕ್ಷತೆ ಕಾನೂನು ರೂಪಿಸಿದ್ದಾರೆ. ನ್ಯಾಟೋವನ್ನು ಗಟ್ಟಿಗಳಿಸುವಲ್ಲಿ ಮತ್ತು ಉಕ್ರೇನ್–ರಷ್ಯಾ ಯುದ್ಧದ ವಿರುದ್ಧ ಇಡೀ ಜಗತ್ತನ್ನು ಸಂಘಟಿಸುವಲ್ಲಿ ಅವರ ಪಾತ್ರ ದೊಡ್ಡದಿದೆ’ ಎಂದು ತಿಳಿಸಿದ್ದಾರೆ.

‘ಹೋರಾಟದಿಂದ ಬೈಡನ್ ಎಂದಿಗೂ ಹಿಂದೆ ಸರಿದವರಲ್ಲ ಎಂದು ನನಗೆ ತಿಳಿದಿದೆ. ಅಮೆರಿಕದ ಒಳಿತಿಗಾಗಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದು ಬೈಡನ್ ಅವರ ದೇಶಭಕ್ತಿಗೆ ಸಾಕ್ಷಿಯಾಗಿದೆ. ದೇಶದ ಜನರ ಒಳಿತಿಗಾಗಿ ತನ್ನ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಡುವ ಮೂಲಕ ಭವಿಷ್ಯದ ನಾಯಕರಿಗೆ ಸ್ಫೂರ್ತಿಯಾಗಿದ್ದಾರೆ’ ಎಂದು ಒಬಾಮ ಹೊಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.