ADVERTISEMENT

ಶಾಂತಿ ಸ್ಥಾಪನೆಗೆ ಒತ್ತು: ಅಫ್ಗನ್

ಅಮೆರಿಕ–ತಾಲಿಬಾನ್‌ ಸಂಧಾನಕಾರರ ಮಾತುಕತೆ ಮುಕ್ತಾಯ

ಏಜೆನ್ಸೀಸ್
Published 12 ಆಗಸ್ಟ್ 2019, 17:04 IST
Last Updated 12 ಆಗಸ್ಟ್ 2019, 17:04 IST

ಕಾಬುಲ್‌ : ‘ಅಮೆರಿಕದ ಪಡೆಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ಕರೆಯಿಸಿಕೊಳ್ಳುವುದು ಮತ್ತು ಶಾಂತಿ ಸ್ಥಾಪನೆ ಬಗ್ಗೆ ತಾಲಿಬಾನ್‌ ಹಾಗೂ ಅಮೆರಿಕದ ಸಂಧಾನಕಾರರ ನಡುವೆ ನಡೆದ ಮಾತುಕತೆ ಪರಿಣಾಮ ಕಾರಿಯಾಗಿತ್ತು’ ಎಂದು ತಾಲಿಬಾನ್‌ ವಕ್ತಾರ ಜಬಿಯುಲ್ಲಾ ಮುಜಾಹೀದ್‌ ಸೋಮವಾರ ಹೇಳಿದ್ದಾರೆ.

‘ದೋಹಾದಲ್ಲಿ ನಡೆದ ಎಂಟನೇ ಸುತ್ತಿನ ಮಾತುಕತೆ ಮುಕ್ತಾಯ ಗೊಂಡಿದೆ. ಮುಂದಿನ ನಡೆ ಬಗ್ಗೆ ತಮ್ಮ ತಮ್ಮ ನಾಯಕತ್ವವನ್ನು ಸಂಪರ್ಕಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ’ ಎಂದು ಅವರು ಟ್ವೀಟ್‌ ಮಾಡಿ ದ್ದಾರೆ. ಈ ಬಗ್ಗೆ ಕಾಬೂಲ್‌ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘14,000 ಸೈನಿಕರನ್ನು ಅಫ್ಗಾನಿಸ್ತಾನದಿಂದ ವಾಪಸು ಕರೆಯಿಸಿಕೊಳ್ಳಲು ಪೆಂಟಗನ್‌ ಮುಂದಾಗಿದೆ, ಇತ್ತೀಚಿನ ದಿನಗಳಲ್ಲಿ ಕಾಬೂಲ್‌ನಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದ್ದು, ಅಮೆರಿಕ– ತಾಲಿಬಾನ್‌ ನಡುವಿನ ಒಪ್ಪಂದವನ್ನು ಪ್ರಕಟಿಸುವುದು
ಸನ್ನಿಹತವಾಗುತ್ತಿದೆ’ ಎಂದು ಅಮೆರಿಕದ ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್ಜಾದ್‌ ಭಾನುವಾರ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.