ADVERTISEMENT

ಎ–ಸ್ಯಾಟ್‌ ಪರೀಕ್ಷೆಗೆ ಪೆಂಟಗನ್‌ ಬೆಂಬಲ

ಪಿಟಿಐ
Published 12 ಏಪ್ರಿಲ್ 2019, 20:15 IST
Last Updated 12 ಏಪ್ರಿಲ್ 2019, 20:15 IST

ವಾಷಿಂಗ್ಟನ್‌: ಭಾರತ ಇತ್ತೀಚೆಗೆ ಉಪಗ್ರಹ ನಿಗ್ರಹ ಪರೀಕ್ಷೆ (ಎ–ಸ್ಯಾಟ್‌) ನಡೆಸಿರುವುದನ್ನು ಅಮೆರಿಕದ ಪೆಂಟಗನ್‌ (ರಕ್ಷಣಾ ಸಚಿವಾಲಯ) ಸಮರ್ಥಿಸಿದೆ.

‘ಬಾಹ್ಯಾಕಾಶದಲ್ಲಿ ತಾನು ಎದುರಿಸುತ್ತಿರುವ ಬೆದರಿಕೆಯ ಅರಿವು ಭಾರತಕ್ಕಿದೆ. ಇದೇ ಕಾರಣಕ್ಕಾಗಿ ಭಾರತ ಎ–ಸ್ಯಾಟ್‌ ಪರೀಕ್ಷೆ ನಡೆಸಿದೆ’ ಎಂದು ಅಮೆರಿಕದ ಸ್ಟ್ರಾಟೆಜಿಕ್ ಕಮಾಂಡ್‌ನ ಕಮಾಂಡರ್‌ ಜನರಲ್ ಜಾನ್‌ ಹೈಟನ್ ಹೇಳಿದ್ದಾರೆ.

ಸೆನೆಟ್‌ನ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಾಹ್ಯಾಕಾಶದ ಮೂಲಕ ಆಗುವ ದಾಳಿಯನ್ನು ಸಮರ್ಥವಾಗಿ ಎದುರಿಸುವ ವ್ಯವಸ್ಥೆಯನ್ನು ಹೊಂದಬೇಕು ಎಂಬ ತುಡಿತ ಆ ದೇಶದಲ್ಲಿಯೂ ಇತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.