ಲಿಮಾ, ಪೆರು (ಎಎಫ್‌ಪಿ): ಶ್ರೀಮಂತರು ಮತ್ತು ಬಡವರನ್ನು ಪ್ರತ್ಯೇಕಿಸುತ್ತಿದ್ದ ಗೋಡೆಯನ್ನು ನೆಲಸಮ ಮಾಡುವಂತೆ ಪೆರುವಿನ ಕೋರ್ಟ್ ಆದೇಶಿಸಿದೆ.
‘ಇದು ತಾರತಮ್ಯದ ಗೋಡೆ..ಸಾಮಾಜಿಕ ಸ್ತರದ ಆಧಾರದಲ್ಲಿ ಪೆರು ಜನರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅದು ಸ್ವೀಕಾರಾರ್ಹವೂ ಅಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಗೋಡೆಯನ್ನು ನೆಲಸಮ ಮಾಡಲು 180 ದಿನಗಳ ಗಡುವು ನಿಗದಿ ಮಾಡಿದೆ.
‘ವಾಲ್ ಆಫ್ ಶೇಮ್’ ಎಂದು ಕರೆಯಲಾಗುವ ಗೋಡೆಯು 10 ಕಿ.ಮೀ ಉದ್ದ ಮತ್ತು ಕೆಲವು ಕಡೆಗಳಲ್ಲಿ 2 ಮೀಟರ್ ಎತ್ತರವಿದೆ. ಗೋಡೆಯ ಮೇಲೆ ಮುಳ್ಳಿನ ತಂತಿಗಳನ್ನು ಹಾಕಲಾಗಿದೆ.1980ರಲ್ಲಿ ಗೋಡೆಯನ್ನು ನಿರ್ಮಿಸಲಾಗಿತ್ತು. ಅನಂತರವೂ ಅಕ್ರಮ ಭೂ ಒತ್ತುವರಿ ತಡೆಗೆ ಗೋಡೆಯನ್ನು ವಿಸ್ತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.