ADVERTISEMENT

12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಪನಾಮಾದಲ್ಲಿ ಕೋವಿಡ್‌ ಲಸಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 3:05 IST
Last Updated 13 ಜುಲೈ 2021, 3:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪನಾಮಾ: ಫೈಜರ್‌ ಮತ್ತು ಬಯೋಎನ್‌ಟೆಕ್‌ ಕೋವಿಡ್‌ ಲಸಿಕೆಗಳನ್ನು 12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ನೀಡಲು ಪನಾಮಾ ಅನುಮತಿ ನೀಡಿದೆ. ಈಗಾಗಲೇ ಇವೆರಡೂ ಲಸಿಕೆಗಳನ್ನು 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ.

12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಯಾವಾಗ ಚಾಲನೆ ನೀಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಬಯೋಎನ್‌ಟೆಕ್‌ ಅಭಿವೃದ್ಧಿಪಡಿಸಿರುವ ಫೈಜರ್‌ ಲಸಿಕೆಯು ಜಗತ್ತನ್ನು ಕಾಡುತ್ತಿರುವ ಡೆಲ್ಟಾ ಕೊರೊನಾ ವೈರಸ್‌ ವಿರುದ್ಧ ಹೆಚ್ಚು ಪರಿಣಾಮಕಾರಿಯಲ್ಲ ಎಂಬ ಅಂಶ ಇತ್ತೀಚೆಗೆ ಬಹಿರಂಗವಾಗಿತ್ತು.

ADVERTISEMENT

ಫೈಜರ್‌ ಲಸಿಕೆಯ ಪೂರ್ಣ ಡೋಸ್‌ ಪಡೆದುಕೊಂಡವರು ಡೆಲ್ಟಾ ವೈರಸ್‌ ವಿರುದ್ಧ ಐದು ಪಟ್ಟು ಕಡಿಮೆ ಪ್ರತಿಕಾಯಗಳನ್ನು ಹೊಂದಬಹುದಾದ ಸಾಧ್ಯತೆಗಳಿವೆ ಎಂದು ಅಧ್ಯಯನ ತಿಳಿಸಿತ್ತು. ಈ ಅಧ್ಯಯನ ವರದಿಯು ‘ದಿ ಲ್ಯಾನ್ಸೆಟ್‌ ಜರ್ನಲ್‌‘ನಲ್ಲಿ ಪ್ರಕಟವಾಗಿತ್ತು.

ವೈರಸ್ ಅನ್ನು ಪತ್ತೆಹಚ್ಚಲು ಮತ್ತು ಹೋರಾಡಲು ಸಮರ್ಥವಾಗಿರುವ ಈ ಪ್ರತಿಕಾಯಗಳ ಮಟ್ಟವು ವಯಸ್ಸು ಹೆಚ್ಚಾದಂತೆ ಕಡಿಮೆಯಾಗಿದೆ ಎಂದು ಅಧ್ಯಯನವು ಹೇಳಿತ್ತು. ಅಲ್ಲದೆ, ಪ್ರತಿಕಾಯಗಳ ಮಟ್ಟವು ಕಾಲಾನಂತರದಲ್ಲಿ ಕುಸಿಯುತ್ತವೆ. ಹೀಗಾಗಿ ದುರ್ಬಲರಿಗೆ ಹೆಚ್ಚಿನ ಪ್ರಮಾಣದ ಲಸಿಕೆ ನೀಡಬೇಕಾದ ಅಗತ್ಯವನ್ನು ಅಧ್ಯಯನ ಸಾಬೀತು ಮಾಡಿತ್ತು.

ಬ್ರಿಟನ್‌ನ ‘ಫ್ರಾನ್ಸಿಸ್ ಕ್ರಿಕ್ ಸಂಸ್ಥೆ‘ಯ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.