ನ್ಯೂಯಾರ್ಕ್: 5ರಿಂದ 11 ವರ್ಷದ ಮಕ್ಕಳ ಮೇಲೆ ನಡೆಸಿದ ಪ್ರಯೋಗದಲ್ಲಿ ನಮ್ಮ ಕೋವಿಡ್–19 ಲಸಿಕೆಯು ಶೇ 90.7ರಷ್ಟು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ ಎಂದು ಅಮೆರಿಕದ ಫೈಜರ್–ಬಯೋಎನ್‌ಟೆಕ್ ಕಂಪನಿ ಹೇಳಿಕೊಂಡಿದೆ.
ಕೋವಿಡ್‌ಗೆ ಚಿಕಿತ್ಸೆ ಪಡೆದ ಹಾಗೂ ಲಸಿಕೆ ಪಡೆದ ಮಕ್ಕಳಲ್ಲಿರುವ ರೋಗನಿರೋಧಕ ಶಕ್ತಿಯನ್ನು ತುಲನೆ ಮಾಡಲಾಗಿತ್ತು ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತಕ್ಕೆ ದಾಖಲೆ ಸಲ್ಲಿಸಿದ ಬಳಿಕ ಕಂಪನಿ ಹೇಳಿದೆ.
ಒಟ್ಟು 2,268 ಮಕ್ಕಳು ಪ್ರಯೋಗಕ್ಕೆ ಒಳಪಟ್ಟಿದ್ದರು. ಈ ಪೈಕಿ ಕೋವಿಡ್‌ಗೆ ಚಿಕಿತ್ಸೆ ಪಡೆದವರು ಮತ್ತು ಲಸಿಕೆ ಮಾತ್ರ ಪಡೆದ ಮಕ್ಕಳೂ ಇದ್ದರು. ಕೋವಿಡ್‌ಗೆ ಚಿಕಿತ್ಸೆ ಪಡೆದ ಮಕ್ಕಳ ಜತೆ ಹೋಲಿಸಿದರೂ ಲಸಿಕೆ ಪಡೆದವರಲ್ಲಿ ಅದರ ಪರಿಣಾಮಕಾರಿತ್ವ ಶೇ 90.7ರಷ್ಟಿದೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.