ADVERTISEMENT

ಫಿಲಿಪಿನ್ಸ್‌: ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ ವೇಳೆ ಬಾಂಬ್‌ ಸ್ಫೋಟ; 4 ಜನರ ಸಾವು

ರಾಯಿಟರ್ಸ್
Published 3 ಡಿಸೆಂಬರ್ 2023, 5:50 IST
Last Updated 3 ಡಿಸೆಂಬರ್ 2023, 5:50 IST
<div class="paragraphs"><p>ಫಿಲಿಪಿನ್ಸ್‌ನ ಮಾರವಾಯ್‌ ನಗರದಲ್ಲಿರುವ ವಿಶ್ವವಿದ್ಯಾಲಯದ ಜಿಮ್ನಾಷಿಯಮ್‌ನಲ್ಲಿ ಭಾನುವಾರ ನಡೆದ ಬಾಂಬ್‌ ಸ್ಫೋಟದ&nbsp; ನಂತರ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಕುರ್ಚಿಗಳು</p></div>

ಫಿಲಿಪಿನ್ಸ್‌ನ ಮಾರವಾಯ್‌ ನಗರದಲ್ಲಿರುವ ವಿಶ್ವವಿದ್ಯಾಲಯದ ಜಿಮ್ನಾಷಿಯಮ್‌ನಲ್ಲಿ ಭಾನುವಾರ ನಡೆದ ಬಾಂಬ್‌ ಸ್ಫೋಟದ  ನಂತರ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಕುರ್ಚಿಗಳು

   

ರಾಯಿಟರ್ಸ್ ಚಿತ್ರ

ಮನಿಲಾ: ಪ್ರಭಲ ಭೂಕಂಪದಿಂದ ಸುನಾಮಿ ಭೀತಿ ಎದುರಿಸುತ್ತಿದ್ದ ಫಿಲಿಪಿನ್ಸ್‌, ಭಾನುವಾರ ಬೆಳಿಗ್ಗೆ ಭಯೋತ್ಪಾದಕರ ದಾಳಿಗೆ ನಲುಗಿದೆ. ದೇಶದ ದಕ್ಷಿಣ ಭಾಗದಲ್ಲಿರುವ ವಿಶ್ವವಿದ್ಯಾಲಯದ ಜಿಮ್ನಾಷಿಯಮ್‌ನಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಕ್ಯಾಥೊಲಿಕ್ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ ವೇಳೆ ಸಂಭವಿಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ಕು ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

ADVERTISEMENT

ಮುಸ್ಲಿಂ ಭಯೋತ್ಪಾದಕರ ಕೃತ್ಯ ಎಂದು ಅಲ್ಲಿನ ಪೊಲೀಸರು ಹೇಳಿದ್ದು, ದೇಶದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಫರ್ಡಿನಂಡ್ ಮಾರ್ಕೊಸ್ ಜೂನಿಯರ್‌, ‘ವಿದೇಶಿ ಭಯೋತ್ಪಾದಕರ ಪ್ರಜ್ಞಾಶೂನ್ಯ ಹಾಗೂ ಅತ್ಯಂತ ಹ್ಯೇಯ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ಮುಗ್ದರ ಮೇಲೆ ಹಿಂಸಾಚಾರ ನಡೆಸಿರುವ ತೀವ್ರವಾದಿಗಳು ನಮ್ಮ ಸಮಾಜದ ಶತ್ರುಗಳೇ ಆಗಿದ್ದಾರೆ’ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

2017ರಲ್ಲಿ ಐದು ತಿಂಗಳ ಕಾಲ ಮುಸ್ಲಿಂ ಭಯೋತ್ಪಾದಕರ ಹಿಡಿತದಲ್ಲಿ ಸಿಲುಕಿದ್ದ ಮಾರವಾಯ್‌ ನಗರದಲ್ಲೇ ಭಾನುವಾರ ಬಾಂಬ್ ದಾಳಿ ನಡೆದಿದೆ. ಇದೇ ಪ್ರದೇಶದಲ್ಲಿ ದವ್ಲಾಹ್ ಇಸ್ಲಾಮಿಯಾ ಭಯೋತ್ಪಾದಕ ಗುಂಪಿಗೆ ಸೇರಿದ 11 ಜನರನ್ನು ಫಿಲಿಪಿನ್ಸ್ ಸೇನೆ ಶನಿವಾರ ಹತ್ಯೆಗೈದಿತ್ತು. ಜತೆಗೆ 10 ಅತ್ಯಾಧುನಿಕ ಬಂದೂಕು ಹಾಗೂ ಮೂರು ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದರು. ಅದೇ ಸ್ಥಳದಲ್ಲಿ ಭಾನುವಾರ ಬಾಂಬ್‌ ಸ್ಫೋಟಿಸಲಾಗಿದೆ.

ದೇಶದ ನಾಗರಿಕರ ಸುರಕ್ಷತೆ ಹಾಗೂ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹಾಗೂ ಸೇನೆಗೆ ನಿರ್ದೇಶಿಸಲಾಗಿದೆ. ಇಂಥ ಕೃತ್ಯ ಎಸಗಿದವರನ್ನು ನ್ಯಾಯದ ಎದುರು ತರುತ್ತೇವೆ ಎಂದು ಮಾರ್ಕೊಸ್ ಜೂನಿಯರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.