ಮನಿಲಾ: ದೇಶದ ಗಡಿ ಮತ್ತು ಶಾಂತಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಚೀನಾದ ಯತ್ನ ಹೆಚ್ಚುತ್ತಿರುವಂತೆಯೇ, ಸಮುದ್ರ ಮಾರ್ಗದಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನ್ಯಾಂಡ್ ಮಾರ್ಕಸ್ ಜೂನಿಯರ್ ಆದೇಶಿಸಿದ್ದಾರೆ.
ಈ ಕುರಿತ ಆದೇಶದಲ್ಲಿ ಚೀನಾದ ಉಲ್ಲೇಖವಿಲ್ಲ. ಆದರೆ, ದಕ್ಷಿಣ ಚೀನಾ ಸಮುದ್ರ ವಲಯದಲ್ಲಿ ಇತ್ತೀಚಿಗೆ ನಡೆದ ನೌಕಾಪಡೆಯ ಸಂಘರ್ಷ, ಅತಿಕ್ರಮಣ ಯತ್ನಗಳ ಹಿಂದೆಯೇ ಫಿಲಿಪ್ಪೀನ್ಸ್ ಸರ್ಕಾರ ಇಂತಹ ಆದೇಶವನ್ನು ಹೊರಡಿಸಿದೆ.
ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತು ಪ್ರತಿಕ್ರಿಯಿಸಿಲ್ಲ. ದಕ್ಷಿಣ ಚೀನಾ ಸಮುದ್ರದ ವ್ಯಾಪ್ತಿ ಬಹುತೇಕ ತನ್ನ ಗಡಿಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸುತ್ತಿದೆ. ಫಿಲಿಪ್ಪೀನ್ಸ್, ವಿಯೆಟ್ನಾಂ, ಇಂಡೊನೇಷ್ಯಾ, ಮಲೇಷ್ಯಾ ಪ್ರತಿಪಾದನೆಯನ್ನು ಕಡೆಗಣಿಸಿದೆ.
ಚೀನಾದ ಪ್ರತಿಪಾದನೆಗೆ ಯಾವುದೇ ಕಾಯ್ದೆಯ ಬಲವಿಲ್ಲ ಎಂದು ಮಧ್ಯಸ್ಥಿಕೆ ಕುರಿತ ಶಾಶ್ವತ ನ್ಯಾಯಾಲಯ 2016ಲ್ಲಿ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.