ಕರಾಚಿ: ರಂಜಾನ್ ತಿಂಗಳಲ್ಲಿ ಪೈಲಟ್‌ಗಳು ಮತ್ತು ವಿಮಾನ ಪರಿಚಾರಕರು ಕೆಲಸದ ವೇಳೆ ಉಪವಾಸ ಕೈಗೊಳ್ಳುವುದಕ್ಕೆ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ) ಸಂಸ್ಥೆಯು ನಿರ್ಬಂಧ ಹೇರಿದೆ.
ಉಪವಾಸ ಕೈಗೊಳ್ಳುವುದರಿಂದ ನಿರ್ಜಲೀಕರಣ ಸಮಸ್ಯೆ, ಸೋಮಾರಿತನ ಮತ್ತು ನಿದ್ದೆ ಕಾಡುತ್ತದೆ ಎಂಬ ವೈದ್ಯಕೀಯ ಶಿಫಾರಸನ್ನು ಪರಿಗಣಿಸಿ ಸಂಸ್ಥೆಯು ಈ ತೀರ್ಮಾನ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಪೊರೆಟ್ ಸುರಕ್ಷತೆ ನಿರ್ವಹಣೆ ಮತ್ತು ವೈಮಾನಿಕ ಸಿಬ್ಬಂದಿಯ ವೈದ್ಯಕೀಯ ಕೇಂದ್ರವು ಪಿಐಎಗೆ ಈ ಶಿಫಾರಸು ಮಾಡಿತ್ತು.
ಪೈಲಟ್ ಅಥವಾ ವಿಮಾನದ ಸಿಬ್ಬಂದಿ ಉಪವಾಸದಲ್ಲಿದ್ದರೆ ಅವರಿಗೆ ಕೆಲಸ ಮಾಡಲು ಅನುಮತಿ ನೀಡುವುದಿಲ್ಲ ಎಂದೂ ಪಿಐಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
2020 ಮೇ ತಿಂಗಳಲ್ಲಿ ಕರಾಚಿ ವಿಮಾನ ನಿಲ್ದಾಣದ ಬಳಿ ಪಿಐಎ ಸಂಸ್ಥೆಯ ವಿಮಾನವು ಅಪಘಾತಕ್ಕೀಡಾದ ಪ್ರಕರಣದ ತನಿಖೆ ನಡೆಸಿದ್ದ ತನಿಖಾ ತಂಡವು, ಈ ಅಪಘಾತವು ಮಾನವ ದೋಷದಿಂದ ಸಂಭವಿಸಿದೆ ಎಂದು ಈಚೆಗೆ ಹೇಳಿತ್ತು. ಈ ಅಪಘಾತದಲ್ಲಿ 99 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.