ADVERTISEMENT

ಅಮೆರಿಕದ ಮಿಸಿಸಿಪ್ಪಿ ವಾಲ್‌ಮಾರ್ಟ್‌ ಮೇಲೆ ವಿಮಾನ ದಾಳಿ ಬೆದರಿಕೆ

ರಾಯಿಟರ್ಸ್
Published 3 ಸೆಪ್ಟೆಂಬರ್ 2022, 14:42 IST
Last Updated 3 ಸೆಪ್ಟೆಂಬರ್ 2022, 14:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಿಸಿಸಿಪ್ಪಿ: ಇಲ್ಲಿನ ವಾಲ್‌ಮಾರ್ಟ್‌ ಶಾಂಪಿಂಗ್‌ ಮಾಲ್‌ ಮೇಲೆ ವಿಮಾನ ದಾಳಿ ನಡೆಸುವುದಾಗಿ ಪೈಲಟ್‌ ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ಜನರನ್ನು ಸ್ಥಳಾಂತರಿಸಲಾಯಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಪರಿಸ್ಥಿತಿಯ ಕುರಿತು ಮಾಹಿತಿ ಬಂದಿತ್ತು. ಈ ಕೂಡಲೇ ಪೈಲಟ್‌ನೊಂದಿಗೆ ನೇರವಾಗಿ ಮಾತುಕತೆ ಆರಂಭಿಸಲಾಯಿತು. ಜೊತೆಗೆ ವಾಲ್‌ಮಾರ್ಟ್‌ ಮತ್ತು ಗ್ಯಾಸ್‌ ಸ್ಟೇಶನ್‌ಗಳಿಂದ ಜನರನ್ನು ಸ್ಥಳಾಂತರಿಸಲಾಯಿತು ಎಂದು ತಿಳಿಸಿದ್ದಾರೆ.

ವಾಲ್‌ಮಾರ್ಟ್‌ ಮೇಲೆ ಅತ್ಯಂತ ಕಡಿಮೆ ಎತ್ತರದಲ್ಲಿ ಸಣ್ಣ ವಿಮಾನವೊಂದು ಹಾರಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.