ಮಾಸ್ಕೊ:ಉಕ್ರೇನ್ ನಿರಾಶ್ರಿತರಿಗೆ ನೆರವಾಗುವ ಉದ್ದೇಶದಿಂದ ರಷ್ಯಾದ ನೊಬೆಲ್ ಶಾಂತಿ ಪುರಸ್ಕೃತ, ಪತ್ರಕರ್ತ ಡಿಮಿರ್ಟಿ ಮುರಾಟೊವ್ ಅವರು ತಮ್ಮ ನೊಬೆಲ್ ಪಾರಿತೋಷಕವನ್ನೇ ಮಾರಲು ಮುಂದಾಗಿದ್ದಾರೆ.
ಮುರಾಟೊವ್ ಅವರ ನೊಬೆಲ್ ಪದಕವನ್ನು ಇದೇ 20ರ ವಿಶ್ವ ನಿರಾಶ್ರಿತರ ದಿನದಂದು ಬಹುಮಾನ ಸಮಿತಿಯ ಒಪ್ಪಿಗೆಯೊಂದಿಗೆ ಹರಾಜು ಇಡಲಾಗುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುರಾಟೊವ್, ‘ನನ್ನ ದೇಶವು ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಈಗಾಗಲೇ 1.55 ಕೋಟಿ ಮಂದಿ ನಿರಾಶ್ರಿತರಾಗಿದ್ದಾರೆ. ಇವರಿಗಾಗಿ ಪ್ರತಿಯೊಬ್ಬರೂ ನೆರವು ನೀಡುವ ಅಗತ್ಯವಿದೆ’ ಎಂದು ತಿಳಿಸಿದ್ದಾರೆ.
ಮುರಾಟೊವ್ ‘ಬಿಯರ್–ಲೈಕ್’ ಸಹ ಸಂಸ್ಥಾಪಕ ಮತ್ತು ದೀರ್ಘಕಾಲ ‘ನೊವಾಯಾ ಗೆಜೆಟ್’ ದಿನಪತ್ರಿಕೆಯ ಸಂಪಾದಕರಾಗಿದ್ದರು.
ಮಾಧ್ಯಮದ ಮೇಲಿನ ಬಿಗಿ ನಿರ್ಬಂಧಗಳನ್ನು ದಿನಪತ್ರಿಕೆ ಧಿಕ್ಕರಿಸಿತ್ತು. ಸರ್ಕಾರ ವಿರೋಧಿ ವರದಿಗಳ ಕಾರಣದಿಂದ ಕಳೆದ ಮಾರ್ಚ್‌ನಲ್ಲಿ ಪತ್ರಿಕೆಯನ್ನು ಸ್ಥಗಿತಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.