ADVERTISEMENT

ಗಯಾನಾ ಸಂಸತ್‌ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತು

ಪಿಟಿಐ
Published 21 ನವೆಂಬರ್ 2024, 15:50 IST
Last Updated 21 ನವೆಂಬರ್ 2024, 15:50 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಜಾರ್ಜ್‌ಟೌನ್‌: ಎರಡು ದಿನಗಳ ಪ್ರವಾಸದ ಭಾಗವಾಗಿ ಗಯಾನಾ ದೇಶಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಯ ಸಂಸತ್ತಿನ ವಿಶೇಷ ಅಧಿವೇಶವನ್ನು ಉದ್ದೇಶಿಸಿ ಮಾತನಾಡಿದರು. 

‘ಜಗತ್ತು ಈಗ ಎದುರಿಸುತ್ತಿರುವ ಪರಿಸ್ಥಿತಿಯಿಂದ ಹೊರಬರಲು ಪ್ರಜಾಪ್ರಭುತ್ವ ಮತ್ತು ಮಾನವೀಯತೆ ಮೊದಲು ಎನ್ನುವ ಧೋರಣೆ ತಳೆಯಬೇಕು. ಪ್ರಜಾಪ್ರಭುತ್ವ ಮೊದಲು ಎನ್ನುವುದು ಎಲ್ಲರನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯುವುದನ್ನು ಕಲಿಸುತ್ತದೆ. ಮಾನವೀಯತೆ ಮೊದಲು ಎನ್ನುವುದು, ಮಾನವೀಯತೆ ಬಗೆಗೆ ಆಸಕ್ತಿ ಬೆಳೆಯುವಂತೆ ಮಾಡುತ್ತದೆ. ಸಮಾಜ ಬೆಳೆಯಲು ಇದು ಬಹಳ ಮುಖ್ಯವಾಗಿದೆ. ಭಾರತ ಮತ್ತು ಗಯಾನಾ ಎರಡೂ ದೇಶಗಳು ಪ್ರಜಾಪ್ರಭುತ್ವ ಕೇವಲ ವ್ಯವಸ್ಥೆಯಲ್ಲ ಅದು ನಮ್ಮ ಡಿಎನ್‌ಎಯಲ್ಲೇ ಇದೆ ಎನ್ನುವುದನ್ನು ತೋರಿಸಿಕೊಟ್ಟಿದೆ’ ಎಂದು ಹೇಳಿದರು.

ADVERTISEMENT

‘ನಾವು ವಿಸ್ತರಣಾ ವಾದದ ಕಲ್ಪನೆಯೊಂದಿಗೆ ಎಂದಿಗೂ ಮುಂದುವರಿಯಲಿಲ್ಲ. ಸಂಪನ್ಮೂಲ ಸಂಗ್ರಹಣೆಯ ಕಲ್ಪನೆಯಿಂದ ದೂರ ಉಳಿದಿದ್ದೇವೆ. ಇದು ಬಾಹ್ಯಾಕಾಶ ಅಥವಾ ಸಮುದ್ರವಾಗಿರಲಿ ಅದು ಸಾರ್ವತ್ರಿಕ ಸಹಕಾರದ ವಿಷಯವಾಗಿರಬೇಕು, ಸಾರ್ವತ್ರಿಕ ಸಂಘರ್ಷವಲ್ಲ ಎಂದು ನಾನು ನಂಬುತ್ತೇನೆ. ಜಗತ್ತಿಗೆ ಸಹ, ಇದು ಸಂಘರ್ಷದ ಸಮಯವಲ್ಲ, ಸಂಘರ್ಷಗಳನ್ನು ಸೃಷ್ಟಿಸುವ ಪರಿಸ್ಥಿತಿಗಳನ್ನು ಗುರುತಿಸಿ ಅದನ್ನು ನಾಶಪಡಿಸುವ ಸಂದರ್ಭವಾಗಿದೆ’ ಎಂದರು.

‘ಇಂದು ಭಾರತವು ಜಾಗತಿಕ ದಕ್ಷಿಣದ ಧ್ವನಿಯಾಗಿದೆ. ಜಾಗತಿಕ ದಕ್ಷಿಣವು ಹಿಂದೆ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಹಲವು ದೇಶಗಳು ಪರಿಸರವನ್ನು ಹಾಳು ಮಾಡುವ ಮೂಲಕ ಅಭಿವೃದ್ಧಿ ಹೊಂದುತ್ತಿವೆ. ಇಂದು ಜಾಗತಿಕ ದಕ್ಷಿಣವು ಹವಾಮಾನ ಬದಲಾವಣೆಗೆ ದೊಡ್ಡ ಬೆಲೆಯನ್ನು ನೀಡುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.