ADVERTISEMENT

ಸೈಪ್ರಸ್‌ ದೇಶದ ಅಧ್ಯಕ್ಷರಾಗಿ ನಿಕೋಸ್ ಆಯ್ಕೆ: ಮೋದಿ ಅಭಿನಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2023, 4:27 IST
Last Updated 14 ಫೆಬ್ರುವರಿ 2023, 4:27 IST
ನಿಕೋಸ್
ನಿಕೋಸ್   

ನಿಕೋಸಿಯಾ: ‘ಮೆಡಿಟರೇನಿಯನ್’ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪ ರಾಷ್ಟ್ರ ಸೈಪ್ರಸ್‌ನ ಅಧ್ಯಕ್ಷರಾಗಿ ನಿಕೋಸ್ ಕ್ರಿಸ್ಟೋಡುಲಿಡೆಸ್ ಚುನಾಯಿತರಾಗಿದ್ದಾರೆ.

ಪ್ರಬಲ ಪೈಪೋಟಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಆ್ಯಂಡ್ರೆಸ್ ಮಾವ್ರೊಯಾನಿಸ್ ಅವರನ್ನು ಮಣಿಸಿ ನಿಕೋಸ್ ಆಯ್ಕೆಯಾದರು. ಇವರು ಶೇ 51.9 ರಷ್ಟು ಮತಗಳನ್ನು ಪಡೆದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ನಿಕೋಸ್‌ ಅವರು ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇವರ ಪ್ರತಿಸ್ಪರ್ಧಿ ಆ್ಯಂಡ್ರೆಸ್‌ ಅವರು ಹಿರಿಯ ರಾಜತಾಂತ್ರಿಕ ಅಧಿಕಾರಿಯಾಗಿದ್ದಾರೆ.

ADVERTISEMENT

ಸೈಪ್ರಸ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿಕೋಸ್ ಕ್ರಿಸ್ಟೋಡುಲಿಡೆಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸ್ವಚ್ಚ, ಸುಂದರ ಕಡಲ ಕಿನಾರೆಗಳನ್ನು ಹೊಂದಿರುವ ಸೈಪ್ರಸ್, ಇಡೀ ಯೂರೋಪ್‌ನಲ್ಲೇ ಅತ್ಯಂತ ಶುದ್ಧ ಹಾಗೂ ಶುಭ್ರವಾದ ನೀರಿನಿಂದ ಆವೃತವಾಗಿರುವ ‘ದ್ವೀಪ’ ಎಂಬ ಖ್ಯಾತಿ ಪಡೆದಿದೆ.

ಸೈಪ್ರಸ್ ದೇಶದ ಒಟ್ಟಾರೆ ಉದ್ದ 250 ಕಿ.ಮೀ. ಸುಮಾರು 14 ಲಕ್ಷ ಜನಸಂಖ್ಯೆ ಹೊಂದಿರುವ ಸೈಪ್ರಸ್‌ನಲ್ಲಿ ಶೇ 25 ರಷ್ಟು ವಿದೇಶಿಯರು ನೆಲೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.