ADVERTISEMENT

ಲಾವೊಸ್ ಅಧ್ಯಕ್ಷ, ಪ್ರಧಾನಿ ಭೇಟಿ ಮಾಡಿದ ನರೇಂದ್ರ ಮೋದಿ ಮಾತುಕತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2024, 6:35 IST
Last Updated 12 ಅಕ್ಟೋಬರ್ 2024, 6:35 IST
<div class="paragraphs"><p>ಆಸಿಯಾನ್ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗಿ</p></div>

ಆಸಿಯಾನ್ ಶೃಂಗದಲ್ಲಿ ಪ್ರಧಾನಿ ಮೋದಿ ಭಾಗಿ

   

(ಚಿತ್ರ ಕೃಪೆ: X/@narendramodi)

ವಿಯನ್‌ಟಿಯಾನ್ (ಲಾವೊಸ್): ಲಾವೊಸ್ ಅಧ್ಯಕ್ಷ ಥಾಂಗ್ಲೋನ್ ಸಿಸೌಲಿತ್ ಮತ್ತು ಲಾವೊಸ್ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರನ್ನು ಭೇಟಿ ಮಾಡಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಬಾಂಧವ್ಯ ವೃದ್ಧಿ ಕುರಿತು ದ್ವಿಪಕ್ಷೀಯ ಚರ್ಚೆ ನಡೆಸಿದ್ದಾರೆ.

ADVERTISEMENT

ರಕ್ಷಣೆ, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಾಲುದಾರಿಕೆ ಕುರಿತು ಮಾತುಕತೆ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಭಾರತ-ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿರುವ ಲಾವೊಸ್‌‌ಗೆ ಅಭಿನಂದಿನಂದನೆಗಳನ್ನು ಸಲ್ಲಿಸಿದ್ದಾರೆ.

ಲಾವೊಸ್ ಪ್ರಧಾನಿ ಅವರೊಂದಿಗಿನ ಚರ್ಚೆ ಕುರಿತು ಉಲ್ಲೇಖ ಮಾಡಿರುವ ಮೋದಿ, 'ಕೌಶಲ್ಯ, ಶಕ್ತಿ, ಮೂಲಸೌಕರ್ಯ, ಶಿಕ್ಷಣ ಮತ್ತು ಇತರೆ ಕ್ಷೇತ್ರಗಳಲ್ಲಿ ಉಭಯ ದೇಶಗಳ ಪಾಲುದಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಬಯಸುತ್ತೇವೆ' ಎಂದು ಹೇಳಿದ್ದಾರೆ.

'ಮಗದೊಂದು ಪೋಸ್ಟ್‌ನಲ್ಲಿ ಲಾವೊಸ್ ಅಧ್ಯಕ್ಷರ ಭೇಟಿ ಕುರಿತು ತಿಳಿಸಿರುವ ಪ್ರಧಾನಿ ಮೋದಿ. ಉಭಯ ದೇಶಗಳ ಬಾಂಧವ್ಯದ ಕುರಿತು ಸಮಗ್ರವಾಗಿ ಪರಿಶೀಲಿಸಲಿದ್ದೇವೆ. ಸಾಂಸ್ಕೃತಿಕ ಸಹಕಾರದ ಕುರಿತು ಚರ್ಚಿಸಿದ್ದೇವೆ' ಎಂದು ಹೇಳಿದ್ದಾರೆ.

ಈ ಮೊದಲು 21ನೇ ಭಾರತ-ಆಸಿಯಾನ್ ಮತ್ತು 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಭಾರತ-ಆಸಿಯಾನ್ ಬಾಂಧವ್ಯ ಮತ್ತು ಪೂರ್ವ ಕೇಂದ್ರಿತ ನೀತಿಗೆ ಭಾರತವು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.