ಸಿಂಗಪುರ: ಸಿಂಗಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸಿಂಗಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರನ್ನು ಗುರುವಾರ ಭೇಟಿಯಾಗಿದ್ದಾರೆ.
ವಾಂಗ್ ಅವರ ಆಹ್ವಾನದ ಮೇರೆಗೆ ಸಿಂಗಪುರಕ್ಕೆ ತೆರಳಿರುವ ಮೋದಿ ಉಭಯ ದೇಶಗಳ ದ್ವಿಪಕ್ಷೀಯ ಬಾಂಧ್ಯವ ವೃದ್ಧಿ ಕುರಿತು ಚರ್ಚಿಸಿದರು.
ಮಾತುಕತೆಯ ನಂತರ ಉಭಯ ನಾಯಕರು ನಾಲ್ಕು ಜ್ಞಾಪಕ ಪತ್ರಕ್ಕೆ ಸಹಿ ಹಾಕಿದರು.
ವಾಂಗ್ ಜತೆಗಿನ ಮಾತುಕತೆಗೂ ಮುನ್ನ ಸಿಂಗಾಪುರ ಸಂಸತ್ ಭವನದಲ್ಲಿ ಮೋದಿ ಅವರಿಗೆ ವಿಧ್ಯುಕ್ತ ಸ್ವಾಗತ ದೊರೆಯಿತು. ಅಲ್ಲಿನ ಸಂದರ್ಶಕರ ಪುಸ್ತಕಕ್ಕೂ ಮೋದಿ ಸಹಿ ಹಾಕಿದರು.
ವಾಂಗ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮತ್ತು ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಉಭಯ ನಾಯಕರು ಮೊದಲ ಬಾರಿ ಭೇಟಿಯಾಗಿ ಸಭೆ ನಡೆಸಿದರು.
ಇದೇ ಭೇಟಿಯಲ್ಲಿ ಸಿಂಗಪುರ ರಾಷ್ಟ್ರಪತಿ ಥರ್ಮನ್ ಷಣ್ಮುಗರತ್ನಂ ಅವರನ್ನೂ ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.