ADVERTISEMENT

‌ಅಬುಧಾಬಿ ತಲುಪಿದ ಪ್ರಧಾನಿ ಮೋದಿ: ಆತ್ಮೀಯವಾಗಿ ಸ್ವಾಗತಿಸಿದ ಅಧ್ಯಕ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2024, 12:17 IST
Last Updated 13 ಫೆಬ್ರುವರಿ 2024, 12:17 IST
<div class="paragraphs"><p>‌ಅಬುಧಾಬಿ ತಲುಪಿದ ಪ್ರಧಾನಿ ಮೋದಿ</p></div>

‌ಅಬುಧಾಬಿ ತಲುಪಿದ ಪ್ರಧಾನಿ ಮೋದಿ

   

ಪಿಟಿಐ ಚಿತ್ರ

ಅಬುಧಾಬಿ: ದ್ವಿಪಕ್ಷೀಯ ರಾಜತಾಂತ್ರಿಕ ಮಾತುಕತೆ ಮತ್ತು ಹಿಂದೂ ದೇವಾಲಯ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಬುಧಾಬಿಗೆ ತಲುಪಿದ್ದಾರೆ.

ADVERTISEMENT

ಯುಎಇಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಅಧ್ಯಕ್ಷ ಶೇಖ್‌ ಮೊಹಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ಮೋದಿ ಎರಡು ದಿನಗಳ ಗಲ್ಫ್‌ ಪ್ರವಾಸದಲ್ಲಿದ್ದಾರೆ. ನಿನ್ನೆ (ಫೆ.13) ಕತಾರ್‌ ರಾಜಧಾನಿ ದೋಹಾಕ್ಕೆ ಬೇಟಿ ನೀಡಿದ್ದರು. ಭೇಟಿಯ ವೇಳೆ ಗಲ್ಫ್‌ ದೇಶಗಳ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಾಳೆ (ಫೆ.14) ಯುಎಇಯ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. 

ಪ್ರಧಾನಿಯಾದ ಮೇಲೆ ಯುಎಇಗೆ ಮೋದಿ ಅವರ ಏಳನೇ ಭೇಟಿ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.