ಇಸ್ಲಾಮಾಬಾದ್: ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬಿಷ್ಕೆಕ್‌ಗೆ ತೆರಳುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನಕ್ಕೆ ತನ್ನ ವಾಯು ಪ್ರದೇಶವನ್ನು ವಿಶೇಷವಾಗಿ ಮುಕ್ತಗೊಳಿಸುವುದಾಗಿ ಪಾಕಿಸ್ತಾನ ತಿಳಿಸಿದೆ.
ವಾಯು ಪ್ರದೇಶ ಮುಕ್ತಗೊಳಿಸುವ ಬಗ್ಗೆ ಭಾರತೀಯ ಹೈಕಮಿಷನ್‌ನಿಂದ ಸೋಮವಾರ ಮನವಿ ಬಂದಿತ್ತು ಎಂದು ಪಾಕಿಸ್ತಾನ ವಿಮಾನಯಾನ ಸಚಿವ ಘುಲಾಮ್ ಸರ್ವಾರ್ ಖಾನ್ ತಿಳಿಸಿದ್ದಾರೆ. ಆದರೆ, ಪಾಕಿಸ್ತಾನದ ವಾಯು ಪ್ರದೇಶವನ್ನು ಬಳಸಿಕೊಳ್ಳುವುದಿಲ್ಲ ಎಂದು ಭಾರತ ತಿಳಿಸಿದೆ.
ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ಪ್ರಧಾನಿ ಅವರ ಅತಿ ಗಣ್ಯರ ವಿಮಾನ ಒಮನ್, ಇರಾನ್ ಮತ್ತು ಕೇಂದ್ರೀಯ ಏಷ್ಯಾ ರಾಷ್ಟ್ರಗಳ ಮೂಲಕ ಬಿಷ್ಕೆಕ್‌ಗೆ ತೆರಳುತ್ತದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.