ADVERTISEMENT

BRICS | ಮೋದಿ – ಷಿ ಮಾತುಕತೆ: ಭಾರತ, ಚೀನಾ ಗಡಿಯಲ್ಲಿ ಶಾಂತಿ, ಭದ್ರತೆಗೆ ಒತ್ತು

ಪಿಟಿಐ
Published 23 ಅಕ್ಟೋಬರ್ 2024, 13:30 IST
Last Updated 23 ಅಕ್ಟೋಬರ್ 2024, 13:30 IST
<div class="paragraphs"><p>ಮೋದಿ – ಷಿ ಮಾತುಕತೆ</p></div>

ಮೋದಿ – ಷಿ ಮಾತುಕತೆ

   

ಚಿತ್ರ ಕೃಪೆ: @narendramodi

ಕಜಾನ್: ಬ್ರಿಕ್ಸ್‌ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಇಂದು ದ್ವಿಪಕ್ಷೀಯ ಮಾತುಕತೆ ನಡೆಸಿದರು.

ADVERTISEMENT

ಉಭಯ ನಾಯಕರು ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉದ್ದೇಶಿತ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 

ಭಾರತದ ಲಡಾಖ್‌ ಮತ್ತು ಚೀನಾದ ವಾಸ್ತವಿಕ ಗಡಿ ನಿಯಂತ್ರಣಾ ರೇಖೆಯಲ್ಲಿ ಜಂಟಿ ಗಸ್ತು ತಿರುಗಲು ಒಪ್ಪಂದ ಮಾಡಿಕೊಂಡ ಎರಡು ದಿನಗಳ ಬಳಿಕ ಮೋದಿ ಮತ್ತು ಷಿ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. 

ಈ ವೇಳೆ ‘ಪರಸ್ಪರ ಗೌರವ ಮತ್ತು ಸೂಕ್ಷ್ಮತೆ ಆಧಾರದ ಮೇಲೆ ನಮ್ಮ ಸಂಬಂಧವು ಇರಲಿದೆ. ಗಡಿಯಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿರಲಿದೆ. ಭಾರತ ಮತ್ತು ಚೀನಾ ನಡುವಿನ ಒಪ್ಪಂದ ಜನರಿಗೆ ಮಾತ್ರವಲ್ಲ ಶಾಂತಿ ಸ್ಥಿರತೆ ಮತ್ತು ಅಭಿವೃದ್ಧಿಗೂ ಬಹಳ ಮುಖ್ಯವಾಗಿದೆ. ಗಡಿಯಲ್ಲಿ ಕಳೆದ 4 ವರ್ಷಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಒಮ್ಮತ ಮೂಡಿರುವುದನ್ನು ಸ್ವಾಗತಿಸುತ್ತೇವೆ’ ಎಂದು ಪ್ರಧಾನಿ ನರೇಂದ್ರಯವರು ಷಿ ಜಿನ್‌ಪಿಂಗ್‌ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.