ಅಥೆನ್ಸ್: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಕ್ ಸರ್ಕಾರ ಶುಕ್ರವಾರ ಪ್ರತಿಷ್ಠಿತ ‘ಗ್ರ್ಯಾಂಡ್ ಕ್ರಾಸ್ ಆಫ್ ದ ಆರ್ಡರ್’ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಗ್ರೀಕ್ ಅಧ್ಯಕ್ಷೆ ಕಟೆರಿನ ಎನ್ ಸಕೆಲ್ಲಾರೊಪೌಲೌ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಗೆ ಪಾತ್ರರಾದ ವಿದೇಶದ ಮೊದಲ ಮುಖ್ಯಸ್ಥ ಎಂಬ ಹಿರಿಮೆಗೂ ಮೋದಿ ಪಾತ್ರರಾದರು.
ಈ ಕುರಿತ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯವು, ಪ್ರಶಸ್ತಿ ಪ್ರದಾನ ಸಮಾರಂಭ ಅಥೆನ್ಸ್‌ನಲ್ಲಿ ಅಧ್ಯಕ್ಷರ ನಿವಾಸದಲ್ಲಿ ನಡೆಯಿತು ಎಂದು ತಿಳಿಸಿದೆ. ‘ಪ್ರಶಸ್ತಿ ಗ್ರೀಕ್ ಭಾರತದ ಬಗ್ಗೆ ಹೊಂದಿರುವ ಗೌರವದ ದ್ಯೋತಕವಾಗಿದೆ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಈ ಪ್ರಶಸ್ತಿಯನ್ನು ಭಾರತದಲ್ಲಿನ ಎಲ್ಲ ಮಕ್ಕಳಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.