ವಿಯನ್ನಾ: ರಷ್ಯಾ ಪ್ರವಾಸದ ನಂತರ ಆಸ್ಟ್ರಿಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಜನರು ಹಾಗೂ ಆಢಳಿತದಿಂದ ಭವ್ಯ ಸ್ವಾಗತ ಲಭಿಸಿದೆ.
ಮೋದಿ ಅವರು ಸಭಾಂಗಣ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಸಂಗೀತಗಾರರ ಗುಂಪು, ‘ವಂದೇ ಮಾತರಂ’ ಗೀತೆಯನ್ನು ನುಡಿಸಿ, ಹಾಡುವ ಮೂಲಕ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ವಂದೇ ಮಾತರಂ ಪೂರ್ಣಗೊಳ್ಳುವವರೆಗೂ ನಿಂತಿದ್ದ ಮೋದಿ, ನಂತರ ಚಪ್ಪಾಳೆ ತಟ್ಟಿ ಸಂಗೀತಗಾರರನ್ನು ಅಭಿನಂದಿಸಿದರು. ಈ ವಿಡಿಯೊವನ್ನು ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಳೆದ 40 ವರ್ಷಗಳಲ್ಲಿ ಆಸ್ಟ್ರಿಯಾಗೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ. ಮೋದಿ ಅವರನ್ನು ಅಲ್ಲಿನ ಚಾನ್ಸಲರ್ ಕಾರ್ಲ್ ನೇಮರ್ ಅವರು ಬರಮಾಡಿಕೊಂಡರು.
ಈ ಭೇಟಿಯ ಸಂದರ್ಭದಲ್ಲಿ ಆಸ್ಟ್ರಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಂತರ ಭಾರತ ಮೂಲಕ ಉದ್ಯಮಿಗಳ ನಿಯೋಗವನ್ನೂ ನರೇಂದ್ರ ಮೋದಿ ಅವರು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.