ADVERTISEMENT

ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪ್ರಧಾನಿ ಮೋದಿ ಭಾಷಣ: ಮುಖ್ಯಾಂಶಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2021, 14:42 IST
Last Updated 25 ಸೆಪ್ಟೆಂಬರ್ 2021, 14:42 IST
ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (ಎಪಿ ಚಿತ್ರ)
ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (ಎಪಿ ಚಿತ್ರ)   

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ 76ನೇ ಮಹಾ ಅಧಿವೇಶನದಲ್ಲಿ ಶನಿವಾರ ಭಾಷಣ ಮಾಡಿದರು. ಮೋದಿ ಮಾತಿನ ಮುಖ್ಯಾಂಶಗಳು ಇಲ್ಲಿವೆ;

* ವೈವಿಧ್ಯತೆಯೇ ಭಾರತದ ಪ್ರಜಾಪ್ರಭುತ್ವದ ಹೆಗ್ಗುರುತು

* ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಭಾರತವು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 75 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ

ADVERTISEMENT

* ಅಭಿವೃದ್ಧಿಯು ಎಲ್ಲರನ್ನೂ ಒಳಗೊಂಡಿರಬೇಕು ಮತ್ತು ಸಾರ್ವತ್ರಿಕವಾಗಿ ಎಲ್ಲರನ್ನು ಪೋಷಿಸುವಂತಿರಬೇಕು. ಅಂತ್ಯೋದಯ ತತ್ವವನ್ನು ಗಮನದಲ್ಲಿಟ್ಟುಕೊಂಡು ಭಾರತವು ಇಂದು ಸಮಗ್ರ ಮತ್ತು ಸಮಾನತೆಯ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ

* ಭಾರತವು ವಿಶ್ವದ ಮೊತ್ತ ಮೊದಲ ಡಿಎನ್ಎ ಆಧಾರಿತ ಲಸಿಕೆ ಅಭಿವೃದ್ಧಿಪಡಿಸುತ್ತಿದೆ

* ಕೋವಿಡ್ ವಿರುದ್ಧ ಮೂಗಿನ ಮೂಲಕ ನೀಡಬಹುದಾದ ಲಸಿಕೆಯೂ ಅಭಿವೃದ್ಧಿ ಹಂತದಲ್ಲಿದೆ

* ಭಾರತ ಬೆಳವಣಿಗೆಯಾದಾಗ ಜಗತ್ತು ಬೆಳೆಯುತ್ತದೆ. ಭಾರತ ಸುಧಾರಣೆಯಾದಾಗ ಜಗತ್ತೂ ಬದಲಾಗುತ್ತದೆ.

* ಭಾರತವು ಕೋಟ್ಯಂತರ ನಿರಾಶ್ರತರನ್ನು ಮನೆ ಮಾಲೀಕರನ್ನಾಗುವಂತೆ ಮಾಡಿದೆ

* ಅಫ್ಗಾನಿಸ್ತಾನದ ನೆಲವನ್ನು ಭಯೋತ್ಪಾದನೆ ಹರಡಲು ಮತ್ತು ಉಗ್ರ ಚಟುವಟಿಕೆಗಳಿಗೆ ಬಳಸದಂತೆ ಖಾತರಿಪಡಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ

* ನಮ್ಮ ಸಾಗರಗಳು ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟಿನ ಜೀವನಾಡಿಯಾಗಿವೆ. ಅವುಗಳನ್ನು ರಕ್ಷಿಸಬೇಕಿದೆ

* ನಮ್ಮೆಲ್ಲರ ಪ್ರಯತ್ನದಿಂದಾಗಿ ನಾವು ಜಗತ್ತನ್ನು ಪ್ರತಿಯೊಬ್ಬರಿಗೂ ಇನ್ನಷ್ಟು ಉತ್ತಮ ತಾಣವನ್ನಾಗಿ ಮಾಡಬಹುದು.

* ವಿಶ್ವಸಂಸ್ಥೆಯು ಪ್ರಸ್ತುತತೆಯನ್ನು ಉಳಿಸಿಕೊಳ್ಳಬೇಕಾದರೆ, ಅದು ಅದರ ಪರಿಣಾಮಕಾರಿತ್ವವನ್ನು ಸುಧಾರಿಸಬೇಕು, ವಿಶ್ವಾಸಾರ್ಹತೆಯನ್ನು ಹೆಚ್ಚಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.