ವಾಷಿಂಗ್ಟನ್: ಧರ್ಮನಿಂದನೆ ಆರೋಪ ಎದುರಿಸುತ್ತಿರುವ 40ಕ್ಕೂ ಹೆಚ್ಚು ಧಾರ್ಮಿಕ ಆಲ್ಪಸಂಖ್ಯಾತರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನವನ್ನು ಅಮೆರಿಕ ಆಗ್ರಹಿಸಿದೆ.
ವಿವಿಧ ಧರ್ಮಗಳ ಸ್ವಾತಂತ್ರ್ಯದ ಕುರಿತು ಕಾಳಜಿ ವಹಿಸಲು ರಾಯಭಾರಿಯನ್ನು ನೇಮಿಸುವಂತೆಯೂ ಅಮೆರಿಕ ಇದೇ ವೇಳೆ ಪಾಕ್‌ಗೆ ತಿಳಿಸಿದೆ.
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವಾರ್ಷಿಕ ವರದಿಯನ್ನು (2018) ಬಿಡುಗಡೆ ಮಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮಾಹಿತಿ ನೀಡಿದರು. ವರದಿ ಪ್ರಕಾರ ಪಾಕ್‌ನಲ್ಲಿ ಸುಮಾರು 77 ಜನರು ಧರ್ಮನಿಂದನೆ ಪ್ರಕರಣ ಎದುರಿಸುತ್ತಿದ್ದಾರೆ. ಅವರಲ್ಲಿ 28 ಜನರು ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ.
ಅಲ್ಪಸಂಖ್ಯಾತರ ಮೇಲೆ ಭಾರತದಲ್ಲಿ ಹಲ್ಲೆ: ವರದಿ
ವಾಷಿಂಗ್ಟನ್ (ಪಿಟಿಐ): ಗೋವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ, ಕೊಲ್ಲುತ್ತಿದ್ದಾರೆ ಎನ್ನುವ ವದಂತಿಗಳಿಂದಾಗಿ ಭಾರತದಲ್ಲಿಅಲ್ಪಸಂಖ್ಯಾತರ ಮೇಲೆ, ಅದರಲ್ಲೂಮುಸ್ಲಿಂ ಸಮುದಾಯದ ಮೇಲೆಹಿಂದೂ ತೀವ್ರವಾದಿ ಸಂಘಟನೆಗಳ ಗುಂಪುದಾಳಿ 2018ರಲ್ಲೂ ಮುಂದುವರಿದಿತ್ತು ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.