ADVERTISEMENT

ಪೋಪ್‌ ಫ್ರಾನ್ಸಿಸ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌: ವ್ಯಾಟಿಕನ್‌ಗೆ ಪ್ರಯಾಣ

ಏಜೆನ್ಸೀಸ್
Published 1 ಏಪ್ರಿಲ್ 2023, 11:44 IST
Last Updated 1 ಏಪ್ರಿಲ್ 2023, 11:44 IST
ಪೋಪ್‌ ಫ್ರಾನ್ಸಿಸ್‌ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ತಮ್ಮ ಹಿತೈಶಿಗಳೊಂದಿಗೆ ಮಾತುಕತೆ ನಡೆಸಿದರು –ಎಎಫ್‌ಪಿ ಚಿತ್ರ
ಪೋಪ್‌ ಫ್ರಾನ್ಸಿಸ್‌ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ತಮ್ಮ ಹಿತೈಶಿಗಳೊಂದಿಗೆ ಮಾತುಕತೆ ನಡೆಸಿದರು –ಎಎಫ್‌ಪಿ ಚಿತ್ರ   

ರೋಮ್‌ (ಎಎಫ್‌ಪಿ): ಉಸಿರಾಟದ ಸಮಸ್ಯೆಯಿಂದ (ಬ್ರಾಂಕೈಟಿಸ್‌) ಬಳಲುತ್ತಿದ್ದ ಪೋಪ್‌ ಫ್ರಾನ್ಸಿಸ್‌ ಅವರು ಚಿಕಿತ್ಸೆ ಪಡೆದು ಶನಿವಾರ ವ್ಯಾಟಿಕನ್‌ಗೆ ತೆರಳಿದರು.‌

ಆಸ್ಪತ್ರೆಯಿಂದ ಹೊರಗೆ ಬರುತ್ತಿದ್ದಂತೆಯೇ ‘ನಾನು ಇನ್ನೂ ಜೀವಂತವಾಗಿದ್ದೇನೆ’ ಎಂದು 84 ವರ್ಷದ ಪಾದ್ರಿ ತಮ್ಮ ಹಿತೈಶಿಗಳಿಗೆ ತಿಳಿಸಿದ್ದಾರೆ.

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಫ್ರಾನ್ಸಿಸ್‌ ಅವರನ್ನು ಬುಧವಾರದಂದು ರೋಮ್‌ನ ಗಿಮೆಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂರು ದಿನದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ADVERTISEMENT

ಕ್ರಿಶ್ಚಿಯನ್ನರ ಪವಿತ್ರ ವಾರ (ಏ. 2ರಿಂದ 8ರವರೆಗೆ) ಹಾಗೂ ಈಸ್ಟರ್‌ ಹಬ್ಬದ (ಏ.9) ಆಚರಣೆಗೆ ಸಿದ್ಧತೆ ನಡೆಸಲು, ಫ್ರಾನ್ಸಿಸ್‌ ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ತಕ್ಷಣವೇ ವ್ಯಾಟಿಕನ್‌ಗೆ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.